More

    ಸಶಕ್ತ ಸಮಾಜ ನಿರ್ಮಿಸುವಲ್ಲಿ ಜಾಗೃತರಾಗಿ

    ಅಥಣಿ ಗ್ರಾಮೀಣ: ಮುತ್ತು ಕಟ್ಟುವುದು, ದೇವದಾಸಿ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳು ಸಾಮಾಜಿಕ ಪಿಡುಗಾಗಿದ್ದು, ಅನಕ್ಷರತೆ ಮೂಢ-ನಂಬಿಕೆಗಳನ್ನು ಮೆಟ್ಟಿ ನಿಂತು ಸುಂದರ ಹಾಗೂ ಸಶಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಜಾಗೃತಿಸಬೇಕು ಎಂದು ಸಹಾಯಕ ಶಿಶು ಅಭಿವದ್ಧಿ ಯೋಜನಾಧಿಕಾರಿ ರೇಣುಕಾ ಹೊಸಮನಿ ಹೇಳಿದರು.

    ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ರೇಣುಕಾ ಯಲ್ಲಮ್ಮದೇವಿ ಜಾತ್ರೆಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದೇವದಾಸಿ ಪದ್ಧತಿ ನಿರ್ಮೂಲನೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಯಾರ ಮೈಯಲ್ಲೂ ದೇವರು ಬರುವುದಿಲ್ಲ. ಜಡೆ ಕಟ್ಟುವುದರಿಂದ ದೇವಿ ಬರುತ್ತಾಳೆ ಎಂಬುುದು ಶುದ್ಧ ಸುಳ್ಳು. ಕೂದಲಿಗೆ ಪ್ಲೇಕಾಲಾನಿಕಾ ಎಂಬ ಸೋಂಕು ತಗುಲಿ ಹೊಲಸಾಗಿ ಜಿಡ್ಡುಗಟ್ಟಿ ಕೂದಲಿನಲ್ಲಿ ಸತ್ವ ಇಲ್ಲದಂತಾಗಿರುತ್ತದೆ. ದೇವಿ ಜಗ ಹೊತ್ತುಕೊಂಡ ಜೋಗಪ್ಪಗಳಿಗೆ ಭಿಕ್ಷೆ ಹಾಕುವುದನ್ನು ನಿಲ್ಲಿಸಿ ಅವರಿಗೆ ದುಡಿದು ಬದುಕಲು ತಿಳಿಸಬೇಕು. ದೇವಿ ಪ್ರಾಣಿಗಳನ್ನು ಬಲಿ ಕೇಳುವುದಿಲ್ಲ ಎಂದರು.

    ಗ್ರಾಪಂ ಅಧ್ಯಕ್ಷ ಬಾಳಾಸಾಬ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಶಿಶು ಅಭಿವದ್ಧಿ ಯೋಜನಾಧಿಕಾರಿ ಭಾರತಿ ಕಾಂಬಳೆ, ಸುಜಾತಾ ಪಾಟೀಲ, ವೀಣಾ ಅಡಹಳ್ಳಿ, ಶೇಖರ ಕಾಟಕರ, ಎ.ಎಂ.ಪಾಟೀಲ, ರಾಜೇಶ ನಾಯಕ, ಸುಧಾ ಹಿರೇಮಠ, ಅರ್ಜುನ ಪೂಜಾರಿ, ಅನಿಲ ಮುಳಿಕ, ಶಿವಾಜಿ ಚೌವ್ಹಾಣ, ಪ್ರಶಾಂತ ಕಾಂಬಳೆ, ಮಾದು ಚೌವ್ಹಾಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts