More

    ಸವಿತಾ ಸಮಾಜಕ್ಕೆ 2ಎ ಮೀಸಲಾತಿ ಬೇಡ; ಪ್ರವರ್ಗ 1ರ ಒಳ ಮೀಸಲಾತಿ ನೀಡಿ

    ಸಾಗರ: ರಾಜ್ಯದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಸರ್ಕಾರ ಪ್ರವರ್ಗ 2ಎ ಮೀಸಲಾತಿ ನೀಡಿದೆ. ಅದನ್ನು ಕೈಬಿಟ್ಟು ಪ್ರವರ್ಗ 1ರ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಸವಿತಾ ಸಮಾಜದ ಪ್ರದಾಧಿಕಾರಿಗಳು ಸೋಮವಾರ ಉಪ ವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
    ತಾಲೂಕು ಸವಿತಾ ಸಮಾಜದ ಅಧ್ಯಕ್ಷ ವಿ.ಎಂ. ರವಿಪ್ರಕಾಶ್ ಮಾತನಾಡಿ, ಹಾಲಿ ಇರುವ 2ಎ ಪ್ರವರ್ಗದಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಪ್ರಬಲ ಜಾತಿಯವರು ಸವಲತ್ತು ಪಡೆಯುತ್ತಿದ್ದು ನಮಗೆ ಅನ್ಯಾಯವಾಗುತ್ತಿದೆ. ಆದಕಾರಣ 2ಎನಿಂದ ನಮ್ಮ ಜನಾಂಗವನ್ನು ಕೈಬಿಟ್ಟು 1ಕ್ಕೆ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
    ಕ್ಷೌರಿಕ ವೃತ್ತಿಯನ್ನು ಮಾತ್ರ ನೆಚ್ಚಿಕೊಂಡಿರುವ ಸವಿತಾ ಸಮಾಜದ ಸಲೂನ್‌ಗಳು ರಾಜ್ಯದಲ್ಲಿ 3 ಲಕ್ಷದಷ್ಟಿದೆ. ಇತ್ತೀಚೆಗೆ ಬಹುರಾಷ್ಟ್ರೀಯ (ರಿಲಯನ್ಸ್) ಕಂಪನಿ ಸಲೂನ್ ಉದ್ಯಮಕ್ಕೆ ಮುಂದಾಗಿರುವ ಸುದ್ದಿ ಇದೆ. ಹಾಗಾದಲ್ಲಿ ಪಾರಂಪರಿಕವಾಗಿ ಈ ವೃತ್ತಿಯನ್ನು ಮೂರು ಸಾವಿರ ವರ್ಷಗಳಿಂದಲೂ ನಡೆಸಿಕೊಂಡು ಬಂದಿರುವ ನಮ್ಮ ಸಮಾಜದ ಮೂಲ ಕಸುಬಿಗೆ ದೊಡ್ಡ ಹೊಡೆತ ಬೀಳಲಿದೆ. ಜೀವನಾಧಾರವಿಲ್ಲದೆ ಕಷ್ಟ ಅನುಭವಿಸುವಂತಾಗಲಿದೆ. ಹಾಗಾಗಿ ಬಂಡವಾಳಶಾಹಿ ಕಂಪನಿಗಳು ಕ್ಷೌರಿಕ ವೃತ್ತಿಗೆ ಬಾರದ ರೀತಿ ಕಾನೂನು ತಂದು ನಮ್ಮ ಕಸುಬು ಉಳಿಸಿಕೊಡಬೇಕು. ತಾಲೂಕಿನಲ್ಲಿ ಸವಿತಾ ಸಮಾಜಕ್ಕೊಂದು ನಿವೇಶನ ಕಲ್ಪಿಸಬೇಕೆಂದು ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts