More

    ಸ್ವಾವಲಂಬನೆಗೆ ನರೇಗಾ ಆಸರೆ

    ರೋಣ: ಮಹಿಳೆಯರ ಸ್ವಾವಲಂಬನೆಗೆ ನರೇಗಾ ಆಸರೆಯಾಗಿದೆ. ಮಹಿಳೆಯರು ಕೂಲಿ ಕೆಲಸದಲ್ಲಿ ಭಾಗಿಯಾಗಿ ಆರ್ಥಿಕವಾಗಿ ಸದೃಢರಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಕ್ರಮ ಸಂಯೋಜಕ ಕಿರಣಕುಮಾರ ಎಸ್.ಎಚ್. ಸಲಹೆ ನೀಡಿದರು.

    ತಾಲೂಕಿನ ಕುರುಡಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ಯೋಜನೆಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಕುಟುಂಬಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ನೀಡುತ್ತಿರುವ ಈ ಯೋಜನೆಯು ಜೀವನೋಪಾಯದ ಭದ್ರತೆ ಕಲ್ಪಿಸುತ್ತಿದೆ. ಕೌಶಲರಹಿತ ಕೆಲಸ ಮಾಡಲು ಮಹಿಳೆಯರು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು. ಅಳತೆ ಪ್ರಕಾರ ಕೆಲಸ ಮಾಡಿದರೆ ಪ್ರತಿ ದಿನ 316 ರೂ. ಕೂಲಿ ಪಾವತಿಸಲಾಗುತ್ತದೆ ಎಂದರು. ಪಿಡಿಒ ಶಿಲ್ಪಾ ಕವಲೂರ ಮಾತನಾಡಿ, ಮುಂದಿನ ವಾರ ಮಹಿಳೆಯರಿಗಾಗಿಯೇ ಸಮುದಾಯ ಕಾಮಗಾರಿ ಆರಂಭಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ಶೇ 60ರಷ್ಟು ಗುರಿ ಸಾಧನೆ ಮಾಡಬೇಕಿದೆ. ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವುದರಲ್ಲಿ ಗ್ರಾಪಂ ಸದಸ್ಯರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

    ಪಿಡಿಒ ಶಿಲ್ಪಾ ಕವಲೂರ, ಐಇಸಿ ಮಂಜುನಾಥ, ತಾಂತ್ರಿಕ ಸಹಾಯಕ ಅಜಯ ಅಬ್ಬಿಗೇರಿ, ಎನ್‌ಆರ್‌ಎಲ್ಎಂ ತಾಲೂಕು ವ್ಯವಸ್ಥಾಪಕ ಗುರುಬಸಪ್ಪ ವೀರಾಪುರ, ಜಿಕೆಎಂ ಯಶೋಧಾ ಅಮರಗೋಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts