More

    ಸವಕಳಿ ಕಾಣುತ್ತಿದೆ ನಂದಿ ವಿಗ್ರಹ

    ಶಿರಸಿ: ಐತಿಹಾಸಿಕ ಕ್ಷೇತ್ರವಾದ ತಾಲೂಕಿನ ಬನವಾಸಿ ಮಧುಕೇಶ್ವರ ದೇವಾಲಯಲ್ಲಿರುವ ನಂದಿ ವಿಗ್ರಹ ದಿನೆದಿನೇ ಸವಕಳಿ ಕಾಣುತ್ತಿದ್ದು, ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆ. ಸಂರಕ್ಷಣೆಯ ಜವಾಬ್ದಾರಿ ಹೊತ್ತ ಪುರಾತತ್ವ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

    ಬನವಾಸಿ ಎಂದ ತಕ್ಷಣ ಮಧುಕೇಶ್ವರ ದೇವರ ಸನ್ನಿಧಿಯಲ್ಲಿರುವ ಬೃಹತ್ ನಂದಿ ವಿಗ್ರಹ ನೆನೆಪಿಗೆ ಬರುತ್ತದೆ. ಸಭಾಮಂಟಪದ ಎದುರಿನ ಭಾಗದಲ್ಲಿರುವ ನಂದಿ ವಿಗ್ರಹವು ಕ್ಷೇತ್ರಕ್ಕೆ ಬರುವ ಪ್ರವಾಸಿಗರನ್ನೆಲ್ಲ ಮೊದಲು ಆಕರ್ಷಿಸುತ್ತದೆ. ಇಂತಹ ವಿಗ್ರಹದ ಕೆಳಭಾಗ ಅದರಲ್ಲೂ ಕಾಲಿನ ಭಾಗವು ಪ್ರವಾಸಿಗರ ನಿರಂತರ ಸ್ಪರ್ಶದಿಂದಾಗಿ ಸವೆತವನ್ನು ಕಾಣುತ್ತಿದೆ. ಬರುವ ಭಕ್ತರು ಕೈಯಲ್ಲಿ ನಂದಿಯನ್ನು ರ್ಸ³ಸುವ ನಿರಂತರ ಪ್ರಕ್ರಿಯೆಯಿಂದ ನಂದಿಯ ಕಾಲು ಸವಕಳಿಯಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ ಪುರಾತನ ಸ್ಮಾರಕವೊಂದು ಅಳಿದು ಹೋಗುವುದು ನಿಶ್ಚಿತ.

    ಸ್ಪಂದಿಸದ ಇಲಾಖೆ: ಬನವಾಸಿ ದೇವಾಲಯವು ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿದೆ. ಇಲಾಖೆಯನ್ನು ಹೊರತುಪಡಿಸಿ ಯಾವುದೇ ಅಭಿವೃದ್ಧಿ ಮಾಡಲು ಇಲ್ಲಿ ಸಾಧ್ಯವಾಗುವುದಿಲ್ಲ. ಆದರೆ, ಇಲಾಖೆಯ ಕಚೇರಿ ಧಾರವಾಡದಲ್ಲಿದ್ದು, ಅಲ್ಲಿಂದ ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಬಂದು ಪರಿಶೀಲನೆ ನಡೆಸಿ ಹೋಗುತ್ತಾರೆ. ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿ ಯಾರಾದರೂ ಸಂರ್ಪಸಿದರೆ ಸರಿಯಾದ ಸ್ಪಂದನೆ ದೊರೆಯದ ಪರಿಸ್ಥಿತಿ ಇದೆ. ಎಲ್ಲರ ನಂಬಿಕೆಯ ನಂದಿ ವಿಗ್ರಹವನ್ನು ಉಳಿಸಿಕೊಳ್ಳಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.

    ಇಡೀ ದೇವಾಲಯವು ಜೀರ್ಣಾವಸ್ಥೆ ತಲುಪಿದರೂ ಧಾರವಾಡದಲ್ಲಿರುವ ಪುರಾತತ್ವ ಇಲಾಖೆ ಅಧಿಕಾರಿಗಳು ಗಮನ ನೀಡುತ್ತಿಲ್ಲ. ದೂರವಾಣಿ ಮೂಲಕ ಸಂರ್ಪಸಿದರೆ ಸ್ಪಂದನೆಯಿಲ್ಲ. ದೇವಸ್ಥಾನದ ನಂದಿ ವಿಗ್ರಹವನ್ನು ಸಂರಕ್ಷಿಸುವಲ್ಲಿ ಪುರಾತತ್ವ ಇಲಾಖೆ ವಿಫಲವಾಗಿದೆ. ಆದರೆ, ಇನ್ನೂ ಹೆಚ್ಚಿನ ಸವಕಳಿ ಆಗದಂತೆ ತಡೆದು, ಸಂರಕ್ಷಿಸಬೇಕು. ಸ್ಥಳೀಯರಿಗೆ ಜವಾಬ್ದಾರಿ ನೀಡಿದರೆ ಇಲಾಖೆಗಿಂತ ಹೆಚ್ಚಿನ ಅಭಿವೃದ್ಧಿ ಕಾಣಬಹುದು.
    ಬಿ. ಶಿವಾಜಿ ಸಾಮಾಜಿಕ ಕಾರ್ಯಕರ್ತ

    ಬನವಾಸಿಯು ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಪಟ್ಟಣಗಳಲ್ಲೊಂದಾಗಿದೆ. ಅಶೋಕನ ಕಾಲದಿಂದಲೂ ಬನವಾಸಿ ಪ್ರಸಿದ್ಧ ಪಟ್ಟಣವಾಗಿತ್ತು. ನಂತರ ಚುಟುಗಳು, ಶಾತವಾಹನರು, ಕದಂಬರು, ಚಾಲುಕ್ಯರು, ವಿಜಯನಗರದ ಅರಸರು, ಸೋದೆಯ ಅರಸರು ಈ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಿದ್ದು, ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಪ್ರಸ್ತುತ ಬನವಾಸಿಯಲ್ಲಿ ಕಾಣ ಸಿಗುವ ಶಿಲ್ಪಗಳು, ಶಾಸನಗಳು, ಸ್ಮಾರಕಗಳೆಲ್ಲ ಚುಟುಗಳಿಂದ ಸೋದೆ ಅರಸರ ಕಾಲದವರೆಗಿನವು. ಇಲ್ಲಿನ ನಂದಿ ವಿಗ್ರಹ ಕೂಡ ಒಂದು ಸಾವಿರಕ್ಕೂ ಅಧಿಕ ವರ್ಷ ಹಳೆಯದು. ಚಾಲುಕ್ಯರ ಕಾಲದ ನಿರ್ವಣದ ಈ ವಿಗ್ರಹದ ರಕ್ಷಣೆ ತೀರಾ ಅಗತ್ಯವಿದೆ. ಅದಕ್ಕೆ ಸವೆತ ಕಂಡ ಭಾಗಕ್ಕೆ ತಾಮ್ರದ ಹೊದಿಕೆ ಅಥವಾ ರಕ್ಷಣಾತ್ಮಕವಾಗಿ ಏನಾದರು ಕ್ರಮ ಕೈಗೊಂಡರೆ ಇನ್ನೂ ಹೆಚ್ಚಿನ ಸವೆತವನ್ನು ತಡೆಗಟ್ಟಬಹುದು.
    | ಡಾ. ಲಕ್ಷ್ಮೀಶ ಸೋಂದಾ ಇತಿಹಾಸ ಸಂಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts