More

    ಸಲೂನ್​ಗೆ ಎಲ್ಲಿಯವರೆಗೆ ಬೀಗ?



    ರೋಣ: ಕರೊನಾ ಸೋಂಕಿನ ಭೀತಿ, ಲಾಕ್ ಡೌನ್​ನಿಂದಾಗಿ ತಾಲೂಕಿನಾದ್ಯಂತ ಮಾ. 22ರಿಂದ ಎಲ್ಲ ಕ್ಷೌರದ ಅಂಗಡಿಗಳು ಬಾಗಿಲು ಮುಚ್ಚಿ ದ ಪರಿಣಾಮ ನೂರಾರು ಕ್ಷೌರಿಕರ ಬದುಕು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

    ಕ್ಷೌರಿಕರದ್ದು ಜನರನ್ನು ಮುಟ್ಟಿ ಕೆಲಸ ಮಾಡುವಂತಹ ವೃತ್ತಿ. ಜನರ ಉಸಿರಿಗೆ ಉಸಿರು ತಾಕೀಸಿ ಕಟಿಂಗ್ ಮಾಡುತ್ತಾರೆ. ದಾಡಿ, ಕಟಿಂಗ್ ಮಾಡಲು ಕನಿಷ್ಠ ಗ್ರಾಹಕರ ಜೊತೆ ಒಂದು ಗಂಟೆಗಳ ಕಾಲ ಸಂಪರ್ಕದಲ್ಲಿರುತ್ತಾರೆ. ಆದ್ದರಿಂದ ಸೋಂಕು ಹರಡುವ ಭೀತಿ ಇರುವುದರಿಂದ ಸರ್ಕಾರದವರು ಕಟಿಂಗ್ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಿಲ್ಲ. ಗ್ರಾಮೀಣ ಭಾಗ ಸೇರಿ ತಾಲೂಕಿನಾದ್ಯಂತ ಒಂದು ನೂರಕ್ಕೂ ಹೆಚ್ಚು ಕಟಿಂಗ್ ಅಂಗಡಿಗಳಿವೆ. ಇದರಿಂದ ಮೂನ್ನೂರಕ್ಕೂ ಹೆಚ್ಚು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಕರೊನಾ ಭೀತಿ ಹೆಚ್ಚುವ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೊಷಣೆಯಾದ ಮೊದಲ ದಿನದಿಂದಲೇ ಕ್ಷೌರ ಅಂಗಡಿಗಳೆಲ್ಲ ಬಾಗಿಲು ಹಾಕಿದ್ದು, ನಿತ್ಯ ದುಡಿಮೆ ನಂಬಿದ್ದ ಇವರ ಬದುಕು ಈಗ ಅಸಹನೀಯವಾಗುತ್ತಿದೆ.

    ನಿತ್ಯ ದಿನಕ್ಕೆ ಕನಿಷ್ಠ 500 ರಿಂದ 1000 ರೂ. ದುಡಿಯುತ್ತಿದ್ದ ಕ್ಷೌರಿಕರಿಗೆ ಲಾಕ್ ಡೌನ್​ನಿಂದ ದೊಡ್ಡ ಹೊಡೆತ ಬಿದ್ದಿದ್ದು, ನಿತ್ಯದ ಸಂಸಾರ ನಡೆಸುವುದು ಕಷ್ಟದಾಯಕವಾಗಿದೆ. ಪಟ್ಟಣ ಪ್ರದೇಶದ ಒಂದೊಂದು ಅಂಗಡಿಯಲ್ಲಿ ಕನಿಷ್ಠ ಮೂರರಿಂದ ಐವರು ಕಾರ್ವಿುಕರು ಕೆಲಸ ಮಾಡುತ್ತಿದ್ದರು/ ಬಹುತೇಕ ಕಾರ್ವಿುಕರು ತಾವು ದುಡಿದ ಹಣದಲ್ಲಿ ಅರ್ಧದಷ್ಟು ಸಲೂನ್ ಮಾಲೀಕರಿಗೆ ನೀಡುತ್ತಿದ್ದರು. ಸದ್ಯ ಮಾಲೀಕರು, ಕಾರ್ವಿುಕರು ಲಾಕ್ ಡೌನ್ ಯಾವಾಗ ಮುಗಿಯುತ್ತದೆಯೋ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

    ಅನೇಕರಿಗೆ ಮನೆಗೆ ಬಂದು ಕಟಿಂಗ್ ಮಾಡುವಂತೆ ಗ್ರಾಹಕರಿಂದ ಕರೆಗಳು ಬರುತ್ತಿವೆ. ಆದರೆ, ಕರೊನಾ ಸೋಂಕಿನ ಭಯದಿಂದಾಗಿ ಗ್ರಾಹಕರ ಮನೆಗೆ ಹೋಗಲು ಕ್ಷೌರಿಕರು ಹಿಂದೇಟು ಹಾಕುತ್ತಿದ್ದಾರೆ. ದುಡ್ಡಿನ ಆಸೆಗೆ ಬಿದ್ದು ಹೋದ ಕೆಲವರು ಪೊಲೀಸರಿಂದ ಲಾಠಿ ಏಟು ತಿಂದು ನೋವು ಅನುಭವಿಸಿದ ಉದಾಹರಣೆಗಳಿವೆ.

    ನಮ್ಮನ್ನು ಅಸಂಘಟಿತ ಕಾರ್ವಿುಕರ ಪಟ್ಟಿಗೆ ಸೇರಿಸಲಾಗಿದೆ. ಆದರೆ, ನಮಗೆ ಸರ್ಕಾರದಿಂದ ಯಾವುದೆ ಸೌಲಭ್ಯ ಸಿಗುತ್ತಿಲ್ಲ. ಕಟ್ಟಡ ಕೂಲಿ ಕಾರ್ವಿುಕರಿಗೆ ನೀಡುತ್ತಿರುವ ಸೌಲಭ್ಯಗಳನ್ನು ನಮಗೂ ನೀಡಿದರೆ ಒಳ್ಳೆಯದಾಗುತ್ತದೆ ಎಂದು ಕ್ಷೌರಿಕ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ವಿುಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ನಮ್ಮ ಕುಟುಂಬದಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಅಜ್ಜಿ ಸೇರಿ 8 ಜನರಿದ್ದೇವೆ. ಲಾಕ್ ಡೌನ್​ನಿಂದ ಜೀವನ ನಡೆಸುವುದು ಕಷ್ಟವಾಗಿದೆ. ನಿತ್ಯ ದುಡಿದಾಗ ಬರುತ್ತಿದ್ದ ಆದಾಯದಲ್ಲೇ ಅಜ್ಜಿಯ ಔಷಧ, ಮಾತ್ರೆ ಸೇರಿ ಬದುಕಿನ ಬಂಡೆ ಎಳೆಯುತ್ತಿದ್ದೇವು. ಆದರೆ, ಕೆಲಸವೂ ಇಲ್ಲದೆ, ಸರ್ಕಾರ ನೀಡುವ ಪಡಿತರ ಧಾನ್ಯದಿಂದ ಜೀವನ ನಡೆಸುವಂತಾಗಿದೆ.

    | ನಿಂಗಪ್ಪ ಹಡಪದ ಕ್ಷೌರಿಕ, ರೋಣ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts