More

    ಸರ್ ಎಂ.ವಿಶ್ವೇಶ್ವರಯ್ಯ ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪ

    ಸೊಲ್ಲಾಪುರ: ಸರ್ ಎಂ.ವಿಶ್ವೇಶ್ವರಯ್ಯ ಅವರ ಬದುಕು ಮತ್ತು ಸಾಧನೆಯನ್ನು ಅರಿತಷ್ಟೂ ನಮ್ಮ ಯುವಕರ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ. ಇಂದಿನ ಸಮಾಜದಲ್ಲಿ ಅವರ ಪ್ರಾಮಾಣಿಕ, ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪವಾಗಬಲ್ಲದು ಎಂದು ಯುವ ಸಾಹಿತಿ ಚಿದಾನಂದ ಮಠಪತಿ ಹೇಳಿದರು.

    ನಾಗಣಸೂರದ ಎಚ್.ಜಿ.ಪ್ರಚಂಡೆ ಶಾಲೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಗಡಿನಾಡು ಘಟಕದ ವತಿಯಿಂದ ಆಯೋಜಿಸಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜಯಂತ್ಯುತ್ಸವ ಹಾಗೂ ಇಂಜಿನಿಯರ್ಸ್ ದಿನ ಸಮಾರಂಭದಲ್ಲಿ ಮಾತನಾಡಿ, ದೇಶದ ಆಥರ್ಿಕ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಗಾಧವಾದದ್ದು ಎಂದರು.

    ವಿಶ್ವೇಶ್ವರಯ್ಯನವರು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಣದ ತೀವ್ರ ತೊಂದರೆಯಿಂದಾಗಿ ಬೆಂಗಳೂರಿನಿಂದ ಮುದ್ದೇನಹಳ್ಳಿಗೆ 35 ಕಿಮೀ ನಡೆದುಕೊಂಡೇ ಹೋದರು. ಮನೆಯ ಪಾತ್ರೆ ಅಡವಿಟ್ಟು ತಾಯಿ ಹಣ ಹೊಂದಿಸಿಕೊಟ್ಟಿದ್ದರು. ಆದರೆ ಅವರಲ್ಲಿ ಬಡತನಕ್ಕೂ ಬಗ್ಗದ ಜೀವನೋತ್ಸಾಹವಿತ್ತು. ಬದುಕನ್ನು ಎದುರಿಸುವ ದಿಟ್ಟತನವಿತ್ತು ಎಂದು ಹೇಳಿದರು.

    ಪ್ರಾಂಶುಪಾಲ ಸಿದ್ಧರಾಮ ಸೊಲ್ಲಾಪುರೆ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ ನಾಗೂರೆ, ಶಂಕರ ವನಮಾನೆ, ಧರೆಪ್ಪ ತೋಳನೂರೆ, ಮಲ್ಲಪ್ಪ ಕವಟೆ, ಈರಣ್ಣ ಧಾನಶೆಟ್ಟಿ, ಶರಣು ಮಣೂರೆ, ಸೂರ್ಯಕಾಂತ ಕಡಬಗಾವಕರ್, ಅನೀಲ ಇಂಗಳೆ, ಶರಣು ಕೋಳಿ ಇತರರಿದ್ದರು. ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಗೌರವ ಕಾರ್ಯದಶರ್ಿ ಶರಣಪ್ಪ ಫುಲಾರಿ ಸ್ವಾಗತಿಸಿದರು. ಆದರ್ಶ ಕನ್ನಡ ಬಳಗದ ಉಪಾಧ್ಯಕ್ಷ ಬಸವರಾಜ ಧನಶೆಟ್ಟಿ ವಂದಿಸಿದರು.

    ಪ್ರಕಾಶ ಪಾಟೀಲ್ ಅವರಿಗೆ ಆದರ್ಶ ಅಭಿಯಂತರ ಮತ್ತು ಜಿಲ್ಲಾ ಪರಿಷದ್ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯಗುರು ವಿದ್ಯಾಧರ ಗುರವ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

    ಸರ್.ಎಂ.ವಿಶ್ವೇಶ್ವರಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರು. ಅವರ ಸಾಧನೆ ಎಂದಿಗೂ ಶಾಶ್ವತವಾಗಿರುತ್ತದೆ. ಪುಣೆ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದ ವಿಶ್ವೇಶ್ವರಯ್ಯ ಅವರು ಮುಂಬೈಯಿಂದ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು, ಮಹಾ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
    | ಸೋಮಶೇಖರ ಜಮಶೆಟ್ಟಿ, ಅಧ್ಯಕ್ಷ, ಕಸಾಪ ಮಹಾರಾಷ್ಟ್ರ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts