More

    ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗ ಬೇಕು

    ಚಿತ್ರದುರ್ಗ: ದೈನಂದಿನ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವಂಥ ಕೌಶಲ ಶಿಕ್ಷಣವನ್ನು ಮಕ್ಕಳಿಗೆ ಕಲಿಸುವಂತೆ ರಾಜ್ಯಯೋಜನಾ ನಿರ್ದೇಶಕರ ಕಚೇರಿಯ ಶಾಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಗಾಯತ್ರಿದೇವಿ ಶಿಕ್ಷಕರಿಗೆ ಸೂಚಿಸಿದರು.
    ನಗರದ ತರಾಸು ಮಂದಿರದಲ್ಲಿ ಬುಧವಾರ, ಜೆಎಸ್‌ಡಬ್ಲೂೃ ಫೌಂಡೇಶನ್ ಕರ್ನಾಟಕ ಮಾದರಿ ಶಾಲಾ ಮಾರ್ಗದರ್ಶಿ ಕಾರ್ಯಕ್ರಮದಡಿ ಜಿಲ್ಲೆಯ ನೂರು ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸುವ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯ ಮತ್ತು ಕೇಂದ್ರಗಳು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ.
    ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಸಂಸ್ಥೆಗಳು ಸಹಕರಿಸುತ್ತಿವೆ. ಜೆಎಸ್‌ಡಬ್ಲೂೃ,ಯುವ, ಶಿಕ್ಷಣ ಫೌಂಡೇಶನ್,ಉದ್ಯಮ್,ಸತ್ವ,ಸಂಬೋಧಿ ಸೇರಿದಂತೆ 11 ಸಂಸ್ಥೆಗಳು ಜಿಲ್ಲೆಯ 66 ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ 34 ಪೌಢಶಾಲೆಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಮುಂದಾಗಿವೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ,ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬೇಕಿದೆ ಎಂದರು.
    ಜೆಎಸ್‌ಡಬ್ಲೂೃ ಮುಖ್ಯಸ್ಥ ಪ್ರದೀಪ್‌ಶರ್ಮ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ದಾವಣಗೆರೆ, ತುಮ ಕೂರು,ಯಾದಗಿರಿ,ಹಾವೇರಿಗಳ ಜಿಲ್ಲೆಗಳ 105 ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ ಚಿತ್ರದುರ್ಗದಲ್ಲಿ ನೂರು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
    ಯೋಜನೆಗೆ ಸಂಬಂಧಿಸಿದ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಬಿಇಡಿ ಕಾಲೇಜು ಪ್ರಾಚಾರ‌್ಯೆ ಟಿ.ಜಿ.ಲೀಲಾವತಿ, ಉತ್ತಮ ಶಿಕ್ಷಣ ನೀಡಲು ಸರ್ಕಾರಗಳು ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ ಶಿಕ್ಷಕರ ಹಾಗೂ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಕೂಡ ಜಾಸ್ತಿಯಾಗಿದೆ. ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳು ಪೈಪೋಟಿ ಎದುರಿಸುತ್ತಿರುವುದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಬೇಕಿದೆ. ಇದಕ್ಕಾಗಿ ಶಿಕ್ಷಕರಿಗೆ ಅನೇಕ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ,ಡಯಟ್ ಪ್ರಾಚಾರ‌್ಯ ಎಸ್.ಎ.ನಾಸಿರುದ್ದೀನ್,ಜೆ.ಎಸ್.ಡಬ್ಲೂೃ ಸಂಸ್ಥೆಯ ಹರ್ಷವರ್ಧನ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀನಿವಾಸ್,ನಿರ್ಮಲಾದೇವಿ,ತಿಪ್ಪೇಸ್ವಾಮಿ, ಸೈಯದ್‌ಮೊಹಿಸಿನ್ ಹಾಗೂ ಶೈಲಜಾ ಕುಮಾರಿ, ಸವಿತಾ,ವೆಂಕಟೇಶ್ ಮತ್ತಿತರ ಶಿಕ್ಷಣ ಇಲಾಖೆ ಅಧಿಕಾರಿಗಳು,ವಿವಿಧ ಸಂಸ್ಥೆಗಳ ಪ್ರಮುಖರು ಇದ್ದರು. ಸಿಆರ್‌ಪಿ ಮಲ್ಲಿಕಾ ಪ್ರಾರ್ಥಿಸಿದರು. ಶಂಭುಲಿಂಗ ನಡುಮನಿ ಸ್ವಾಗತಿಸಿ,ಮಂಜುನಾಥ ಬೆಸ್ತರ್ ವಂದಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts