More

    ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಲಿ

    ಬೆಳಗಾವಿ: ಚರ್ಮ ಕುಶಲಕರ್ಮಿಗಳ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ. ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ಸಮುದಾಯ ದವರ ಜೀವನೋಪಾಯಕ್ಕೆ ಸರ್ಕಾರ ನೀಡುವ ಯೋಜನೆಯ ಆರ್ಥಿಕ ಹಾಗೂ ಸಾಮಾಜಿಕ ಲಾಭ ಪಡೆದುಕೊಳ್ಳಬೇಕು ಎಂದು ಲೆದರ್ ಅರ್ಟಿಜನ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷ ಸಂತೋಷ ಹೊಂಗಲ ಹೇಳಿದರು

    ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಗಾರ ಹರಳಯ್ಯ (ಚರ್ಮಕಾರ) ಸಮಾಜದ ಸಮ್ಮೇಳನದಲ್ಲಿ ಲೆದರ್ ಅರ್ಟಿಜನ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ಪ್ರತಿಷ್ಠಿತ ಚರ್ಮಶ್ರೀ- 2023ರ ಪ್ರಶಸ್ತಿಯನ್ನು ಎಂ. ಮಂಜುನಾಥ ಅವರಿಗೆ ವಿತರಿಸಿ ಮಾತನಾಡಿದರು.

    ಸಮಾಜ ಕಲ್ಯಾಣ ಇಲಾಖೆಯ ಡಾ.ಬಾಬು ಜಗಜೀವನ ರಾಮ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಚರ್ಮ ಕುಶಲಕರ್ಮಿಗಳು ಯೋಜನೆ ಯಡಿ ಸಿಗುವ ಸಹಾಯಧನದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿ ಮುಖ್ಯ ವಾಹಿನಿಗೆ ಬರಬೇಕು ಎಂದರು. ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ವಾಸುದೇವ ದೊಡಮನಿ, ಜಮಖಂಡಿ ಅರ್ಬನ್ ಬ್ಯಾಂಕ್ ಚೇರ್ಮನ್ ಅಪ್ಪಾಸಾಹೇಬ ಮನಗೂಳಿ, ವಿಮೋವೆ ಫೌಂಡೇಷನ್ ಅಧ್ಯಕ್ಷ ವಿನಯ ಶಿಂಧೆ, ಎಸಿಪಿ ಸದಾಶಿವ ಕಟ್ಟಿಮನಿ, ಸುನೀತಾ ಹೊಂಗಲ, ಸುರೇಶ ಸಾಂಗಲಿ, ಸಾಗರ ಕಿತ್ತೂರು, ದಿಲೀಪ ಕೋಟೆ, ಭೀಮರಾವ ಪವಾರ, ಶಿವಾನಂದ ಮಬ್ರುಂಕರ, ಫಕೀರಪ್ಪ ಬೆಟಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts