More

    ಸರ್ಕಾರಿ ನೌಕರರ ಕ್ರೀಡಾಕೂಟ ಇಂದಿನಿಂದ

    ಧಾರವಾಡ: ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಫೆ. 28, 29 ಮತ್ತು ಮಾ. 1ರಂದು ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿವೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ಧನಗೌಡರ ಹೇಳಿದರು.

    ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಜಿಲ್ಲೆಗಳ 8ರಿಂದ 9 ಸಾವಿರ ಸ್ಪರ್ಧಿಗಳು ಭಾಗವಹಿಸುವರು. 19 ಕ್ರೀಡೆಗಳು, 10 ಸಾಂಸ್ಕೃತಿಕ ಸ್ಪರ್ಧೆಗಳು ಅವಳಿ ನಗರದ 15 ಸ್ಥಳಗಳಲ್ಲಿ ಜರುಗಲಿವೆ. ನಗರದ 30 ಕಡೆಗಳಲ್ಲಿ 9,297 ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಸಾಪ ಭವನದಲ್ಲಿ ಜಿಲ್ಲಾವಾರು ಪ್ರತ್ಯೇಕ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

    ಫೆ. 28ರಂದು ಸಂಜೆ 4 ಗಂಟೆಗೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ರೀಡಾಕೂಟ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಕ್ರೀಡಾ ಧ್ವಜಾರೋಹಣ ನೆರವೇರಿಸುವರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಸಿ.ಟಿ. ರವಿ ಕ್ರೀಡಾಜ್ಯೋತಿ ಸ್ವೀಕರಿಸಲಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದರು. ಮಾ. 1ರಂದು ಸಂಜೆ 3.30ಕ್ಕೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಡಿಸಿ ದೀಪಾ ಚೋಳನ್ ಅಧ್ಯಕ್ಷತೆ ವಹಿಸುವರು.

    ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಬಹುಮಾನ ವಿತರಿಸುವರು. ಅ.ಭಾ. ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ, ವಿ.ವಿ. ಶಿರುದ್ರಯ್ಯ, ಶ್ರೀನಿವಾಸ ಆರ್., ಎಸ್.ಜಿ. ಸುಬ್ಬಾಪುರಮಠ, ರಾಜಶೇಖರ ಬಾಣದ, ಮಂಜುನಾಥ ಡೊಳ್ಳಿನ, ಡಾ. ಸುರೇಶ ಹಿರೇಮಠ, ಕ್ರೀಡಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸುಲಗಿ ಸುದ್ದಿಗೋಷ್ಠಿಯಲ್ಲಿದ್ದರು.

    ನೋಂದಣಿ ವಿವರ: ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಸ್ಪರ್ಧಾಳುಗಳು ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಹತ್ತಿರದ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಹೆಸರು ನೋಂದಣಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 7ರಿಂದ ಸಂಜೆ 4ರವರೆಗೆ ನೋಂದಣಿ ನಡೆಯಲಿದೆ. ಮಾಹಿತಿಗೆ 9080695184, 9611520496, 9448268318 ಸಂರ್ಪಸಲು ಕೋರಿದೆ.

    ವೈದ್ಯಕೀಯ ಉಪಚಾರ ತಂಡ: ವೈದ್ಯ ಡಾ. ಗುರುರಾಜ ಸಕಲಾತಿ (ಮೊ: 94822 77805), ಶುಶ್ರೂಷಕ ರವಿರಾಜ ಪಾಟೀಲ (80506 08027), ಅಂಬುಲೆನ್ಸ್ ಚಾಲಕ ರಾಜೇಸಾಬ್ ನದಾಫ್ (98453 88679) 28ರಂದು ವೈದ್ಯಕೀಯ ಕಾರ್ಯನಿರ್ವಹಿಸುವರು. 29ರಂದು ಡಾ. ಎ.ಬಿ. ಕುಲಕರ್ಣಿ (81235 47764), ಶುಶ್ರೂಷಕ ರವಿರಾಜ ಪಾಟೀಲ (80506 08027) ಕಾರ್ಯನಿರ್ವಹಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts