More

    ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ತರಗತಿ ಆರಂಭಿಸಿ

    ಬೀದರ್: ಇಲ್ಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ಕಾಮಗಾರಿ ತ್ವರಿತವಾಗಿ ಮುಗಿಸಿ, ಪ್ರಸಕ್ತ ವರ್ಷದಿಂದ ತರಗತಿ ಆರಂಭಿಸಲು ಕ್ರಮ ಕೈಗೊಳ್ಳಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಜಿಲ್ಲಾ ಘಟಕ ಆಗ್ರಹಿಸಿದೆ.
    ಡಿಸಿ ಡಾ.ಮಹಾದೇವ ಅವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ರವಾನಿಸಿದ ಪರಿಷತ್ ಪ್ರಮುಖರು. 2016ರಲ್ಲಿ ಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜು ಮಂಜೂರಿ ಸಿಕ್ಕಿದೆ. ಮೊದಲ ಹಂತದಲ್ಲಿ ಕಟ್ಟಡಕ್ಕೆ 25 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ನಿರ್ಮಾಣ ಕಾಮಗಾರಿ ತ್ವರಿತವಾಗಿ ನಡೆಯುತ್ತಿಲ್ಲ. ವಿದ್ಯಾರ್ಥಿಗಳ ಹಿತದಿಂದ ಇದಕ್ಕೆ ವೇಗ ನೀಡಬೇಕೆಂದು ಒತ್ತಾಯಿಸಿದ್ದಾರೆ.
    ರಾಜ್ಯದ ರಾಮನಗರ, ರಾಯಚೂರು, ಹರಪನಳ್ಳಿ ಸೇರಿ ವಿವಿಧೆಡೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಏಕಕಾಲದಲ್ಲಿ ಮಂಜೂರಿ ಪಡೆದಿವೆ. ಸದ್ಯಕ್ಕೆ ಬೀದರ್ ಬಿಟ್ಟರೆ ಬಹುತೇಕ ಕಾಲೇಜುಗಳು ಅಲ್ಲಿರುವ ಸಕರ್ಾರಿ ಡಿಪ್ಲೊಮಾ ಕಾಲೇಜು ಬಳಸಿಕೊಂಡು ತರಗತಿಗಳನ್ನು ಆರಂಭಿಸಿವೆ. ಆದರೆ ಇಲ್ಲಿ ಮಾತ್ರ ಈ ಕಾರ್ಯ ನಡೆದಿಲ್ಲ ಎಂದು ಗಮನ ಸೆಳೆದಿದ್ದಾರೆ.
    ಇಂಜಿನಿಯರಿಂಗ್ ಕಾಲೇಜಿಗೆ ಮಂಜೂರಾದ ಮೆಕಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಅಟೊಮೊಬೈಲ್ಸ್, ಕರ್ಮಷಿಯಲ್ ಪ್ರಾಕ್ಟಿಸ್ ಕೋರ್ಟ್​ಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆ ಪಕ್ಕದ ಹಳೆಯ ಸರ್ಕಾರಿ ಡಿಪ್ಲೊಮಾ ಕಾಲೇಜಿನ ಕಟ್ಟಡ ಖಾಲಿ ಇದ್ದು ಅದಕ್ಕೆ ಅಗತ್ಯ ಸೌಕರ್ಯ ಒದಗಿಸಿ ಪ್ರಸಕ್ತ ಸಾಲಿನಿಂದ ತರಗತಿ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್, ನಗರ ಕಾರ್ಯದಶರ್ಿ ವಿಕಾಸ ಚೋರಮಲ್ಲೆ, ಅಮರ್ ಸುಲ್ತಾನಪುರೆ, ಅರವಿಂದ ಸುಂದಳಕರ್, ನಿಖಿಲ್, ಮಾಣಿಕರಾವ್, ಮೋಹನ ಮಿಠಾರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts