More

    ಸರ್ಕಾರಿ ಆಸ್ಪತ್ರೆಯಲ್ಲಿದೆ ಎಲ್ಲ ಸೌಲಭ್ಯ

    ಸೋಮವಾರಪೇಟೆ : ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ವಿಜಯವಾಣಿ ಪತ್ರಿಕೆ, ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಪೌರಕಾರ್ಮಿಕರಿಗೆ ದಂತ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

    ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಶಿವಪ್ರಸಾದ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದು ಪೌರಕಾರ್ಮಿಕರು ಸದುಪಯೋಗ ಪಡೆದುಕೊಳ್ಳಬೇಕು. ಸಕಾಲದಲ್ಲಿ ಟಿಟಿ ಹೆಪಟೈಟಿಸ್ ಬಿ, ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಕೈಗೆ ಗ್ಲೌಸ್, ಕಾಲಿಗೆ ಬೂಟ್‌ಗಳನ್ನು ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ದಂತ ವೈದ್ಯೆ ಅರ್ಫಿನ್ ಮಾತನಾಡಿ, ಬಾಯಿ ಆರೋಗ್ಯ ಬಹಳ ಮುಖ್ಯವಾಗಿದ್ದು, ಮೊದಲ ಹಂತದಲ್ಲಿ ಚಿಕಿತ್ಸೆಗೆ ಬರಬೇಕು. ದಿನಕ್ಕೆ ಎರಡು ಬಾರಿ ಬ್ರಸ್ ಮಾಡಬೇಕು. ಎಲೆ ಅಡಕೆ, ತಂಬಾಕು ಜಗಿಯುವುದನ್ನು ನಿಲ್ಲಿಸಬೇಕು. ಧೂಮಪಾನದಿಂದಲೂ ವಸಡಿನ ಮೇಲೆ ದುಷ್ಪರಿಣಾಮವಾಗುತ್ತದೆ. ನಾಲಿಗೆ ಚರ್ಮಕ್ಕೆ ಹಾನಿಯಾದರೆ ಕ್ಯಾನ್ಸರ್ ಬರುವ ಸಂದರ್ಭ ಹೆಚ್ಚಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಪಪಂ ಮುಖ್ಯಾಧಿಕಾರಿ ನಾಚಪ್ಪ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್, ಪಪಂ ಆರೋಗ್ಯ ನಿರೀಕ್ಷಕ ಜಾಸಿಂ ಖಾನ್, ಆರೋಗ್ಯ ಸಿಬ್ಬಂದಿ ಚೇತನ್ ಇದ್ದರು. 30 ಪೌರಕಾರ್ಮಿಕರು ತಪಾಸಣೆ ಮಾಡಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts