More

    ಸರ್ಕಾರಿ ಆದೇಶಕ್ಕೆ ಹೈಕೋರ್ಟ್ ತಡೆ

    ರಾಣೆಬೆನ್ನೂರ: ತಾಲೂಕಿನ ಮೇಡ್ಲೇರಿ ಗ್ರಾಮದ ಶ್ರೀ ಬೀರೇಶ್ವರ ದೇವಸ್ಥಾನ ಸೇವಾ ಸಮಿತಿಯನ್ನು ಸಹಕಾರ ಇಲಾಖೆ ಸೂಪರ್​ಸೀಡ್ ಮಾಡಿರುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸಮಿತಿ ಕಾರ್ಯದರ್ಶಿ ದಿಳ್ಳೆಪ್ಪ ಅಣ್ಣೇರ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರೀ ಬೀರೇಶ್ವರ ದೇವಸ್ಥಾನ ಸೇವಾ ಸಮಿತಿ 2004ರಲ್ಲಿಯೇ ನೋಂದಣಿಯಾಗಿದೆ. ದೇವಸ್ಥಾನದ ಜಾತ್ರೆ, ಉತ್ಸವಗಳನ್ನು ನಿರ್ವಹಿಸಲಾಗುತ್ತಿದೆ. ಸಹಕಾರಿ ಇಲಾಖೆ ನಿಯಮಾವಳಿ ಪ್ರಕಾರ ಅಗತ್ಯ ದಾಖಲೆಗಳೂ ಇವೆ. ಜತೆಗೆ ಸರ್ಕಾರಕ್ಕೆ ಲೆಕ್ಕಪತ್ರಗಳನ್ನು ನೀಡುತ್ತ ಬಂದಿದ್ದೇವೆ. ಆದರೆ, ಸ್ಥಳೀಯ ಶಾಸಕರು ಹಾಗೂ ಸಚಿವರು ಅಧಿಕಾರಿಗಳ ಮೇಲೆ ಒತ್ತಡ ತಂದು ದೇವಸ್ಥಾನ ಸಮಿತಿಯನ್ನು ಫೆ. 15ರಂದು ಸೂಪರ್​ಸೀಡ್ ಮಾಡಿಸಿದ್ದಾರೆ ಎಂದು ಆರೋಪಿಸಿದರು. ನೋಟಿಸ್ ಜಾರಿ ಮಾಡಿಲ್ಲ. ಸಹಕಾರಿ ಇಲಾಖೆ ಕಾರ್ಯದರ್ಶಿಯಿಂದಲೂ ಯಾವುದೇ ಸೂಚನೆ ಬಂದಿರಲಿಲ್ಲವಾದ್ದರಿಂದ ಸರ್ಕಾರದ ಕ್ರಮ ಖಂಡಿಸಿ ಮಾ. 9ರಂದು ಹೈಕೋರ್ಟ್ ಮೊರೆ ಹೋಗಿದ್ದೇವು ಎಂದು ತಿಳಿಸಿದರು.

    ದೇವಸ್ಥಾನ ಸಮಿತಿ ಅಧ್ಯಕ್ಷ ಗೊರಜ್ಜ ಗೊರಮಾಳರ, ಉಪಾಧ್ಯಕ್ಷ ನಾಗಪ್ಪ ಪೂಜಾರ, ಸದಸ್ಯರಾದ ಕೃಷ್ಣಪ್ಪ ಗೊರಪ್ಪಳವರ, ಮಾಲಿಂಗಪ್ಪ ಹಾಡೂರ, ಬೀರೇಶ ಕೂನಬೇವು, ಹನುಮಂತಪ್ಪ ಜಾಗ್ಟಿ, ಮೌನೇಶ ಪೂಕಾರ, ದಿಳ್ಳೆಪ್ಪ ಗುತ್ಯಾಳ, ಮಾಲತೇಶ ತಳವಾರ, ರವೀಂದ್ರಗೌಡ ಪಾಟೀಲ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts