More

    ಸರ್ಕಾರದ ನಿಬಂಧನೆ ಮರೆತ ಜನರು

    ಳಿಯಾಳ: ಲಾಕ್​ಡೌನ್ ಸಮಯದಲ್ಲಿ ಸರ್ಕಾರದ ನಿಬಂಧನೆಗಳನ್ನು ಚಾಚೂ ತಪ್ಪದೇ ಪಾಲಿಸಿದ ತಾಲೂಕಿನ ಜನರು, ವ್ಯಾಪಾರಸ್ಥರು ಹಾಗೂ ವರ್ತಕರ ಬಳಗ ಈಗ ಪರಸ್ಪರ ಅಂತರ ಕಾಪಾಡುವುದು, ಮಾಸ್ಕ್ ಧರಿಸುವ ನಿಯಮಗಳ ಪಾಲನೆ ಮರೆತಂತೆ ಕಂಡು ಬರುತ್ತಿದೆ.

    ಸೋಮವಾರದಿಂದ ಅನ್​ಲಾಕ್-1 ದೇಶಾದ್ಯಂತ ಜಾರಿಗೊಳ್ಳುವ ಒಂದು ದಿನ ಮುಂಚೆಯೇ ಭಾನುವಾರ ಹಳಿಯಾಳ ಪಟ್ಟಣದ ಮಾರುಕಟ್ಟೆಗೆ ಜನರು ಸಂತೆ ಮಾರುಕಟ್ಟೆಗೆ ಬಂದವರಂತೆ ಮುಗಿಬಿದ್ದಿದ್ದು ಕಂಡು ಬಂತು.

    ಜಿಲ್ಲಾಡಳಿತದ ಆದೇಶ ಬರುವವರೆಗೂ ತಾಲೂಕಿನಲ್ಲಿ ವಾರದ ಸಂತೆಯನ್ನು ನಿಷೇಧಿಸಲಾಗಿದೆ. ಆದರೆ, ಭಾನುವಾರ ಈ ಹಿಂದಿನಂತೆ ಸಂತೆ ಮಾರುಕಟ್ಟೆಗೆ ಮಾರಾಟಕ್ಕೆ ಬಂದವರಂತೆ ಹಳ್ಳಿಯ ಜನರು ತರಕಾರಿ, ಬೆಳೆ ಇತ್ಯಾದಿಗಳನ್ನು ಮಾರಾಟಕ್ಕೆ ತಂದಿದ್ದರು. ಪರಸ್ಪರ ಅಂತರ ಪಾಲಿಸಲಿಲ್ಲ. ಗ್ರಾಮಾಂತರ ಭಾಗದ ಜನರು ಭಾನುವಾರ ತರಕಾರಿ ಮಾರಾಟ ಮಾಡಲು ಬರದಂತೆ ಸೂಚಿಸಬೇಕೆಂದು ಇಲ್ಲಿನ ಸಾರ್ವಜನಿಕರು ತಾಲೂಕಾಡಳಿತಕ್ಕೆ ಮನವಿ ಮಾಡಿದ್ದಾರೆ.

    ಮಾರುಕಟ್ಟೆ ಲಾಕ್: ತಾಲೂಕಿನ ಹಿತದೃಷ್ಟಿಯಿಂದ ಈ ಹಿಂದೆ ಲಾಕ್​ಡೌನ್ ಸಮಯದಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಸಂಪೂರ್ಣ ಮಾರುಕಟ್ಟೆಯನ್ನು ಲಾಕ್ ಮಾಡಿದಂತೆ ಮತ್ತೆ ಮಾರುಕಟ್ಟೆಯನ್ನು ಲಾಕ್ ಮಾಡುವ ಚಿಂತನೆಯು ಹಳಿಯಾಳ ವ್ಯಾಪಾರಸ್ಥರ ಮತ್ತು ವರ್ತಕರ ಬಳಗದಲ್ಲಿ ಆರಂಭಗೊಂಡಿದೆ. ಇನ್ನೂ ಕೆಲವರು ಸಂಜೆ ಆರು ಗಂಟೆಗೆ ಲಾಕ್ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿ ಈ ಕುರಿತು ಶೀಘ್ರದಲ್ಲಿ ಸಭೆ ಕರೆದು ಅಂತಿಮ ನಿರ್ಣಯ ಕೈಗೊಳ್ಳಲು ವರ್ತಕರ ಒಕ್ಕೂಟ ಪ್ರಯತ್ನ ಆರಂಭಿಸಿದೆ.

    ಮಾಸ್ಕ್ ಧರಿಸದೇ ಮಾರುಕಟ್ಟೆಗೆ ಬರುವವರು ಮತ್ತು ನಗರ ಸುತ್ತಾಡುವವರನ್ನು ಹಿಡಿದು ದಂಡ ವಿಧಿಸಿ, ತಿಳಿ ಹೇಳಿ ಮಾಸ್ಕ್​ಗಳನ್ನು ನೀಡುತ್ತಿದ್ದೇವೆ. ವರ್ತಕತರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿಗಾವಹಿಸಲಿದ್ದೇವೆ.
    | ಕೇಶವ ಚೌಗಲೆ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts