More

    ಸರಳ ಭಾಷೆಯ ಪ್ರಖರ ಪ್ರವಚನಕಾರ- ಬಿ.ವಾಮದೇವಪ್ಪ

    ದಾವಣಗೆರೆ: ನಾಡಿನಾದ್ಯಂತ ನಿರಂತರ ಜ್ಞಾನ ದಾಸೋಹ ಮಾಡುವ ಮೂಲಕ ಸಿದ್ದೇಶ್ವರ ಸ್ವಾಮೀಜಿ ಅರಿವಿನ ಗುರುವಾಗಿದ್ದಾರೆ. ಅವರ ಪ್ರತಿ ನುಡಿಗಳು ಅನುಕರಣೀಯ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಅತ್ಯಂತ ಸರಳ ಭಾಷೆಯಲ್ಲಿ ಅವರು ನೀಡುತ್ತಿದ್ದ ಪ್ರವಚನದಲ್ಲಿ ಗಾಂಭೀರ್ಯ ತುಳುಕಾಡುತ್ತಿತ್ತು. ಅವರು ಭಾವೈಕ್ಯತೆಯ ಪ್ರತಿರೂಪವಾಗಿದ್ದರು. ಹಿಂದು-ಮುಸ್ಲಿಂ ಎಂಬ ಭೇದ ಮಾಡದ, ವಚನಕಾರರ ಹಾಗೂ ತತ್ವಪದಕಾರರ ಅಪೂರ್ವ ಸಂಗಮದಂತಿದ್ದರು ಎಂದರು.
    ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ ಬಂಧುತ್ವ- ಸಹಬಾಳ್ವೆ ಬೆಸೆಯುವ ಅವರ ಸಂದೇಶಗಳು ಜನಸಾಮಾನ್ಯರನ್ನು ಸುಲಭವಾಗಿ ತಲುಪುತ್ತಿದ್ದವು. ನಡೆ- ನುಡಿಯಲ್ಲಿ ಒಂದಾಗಿದ್ದ ಅವರು ಆಧುನಿಕ ಗಾಂಧೀಜಿ ಎಂದು ಭಕ್ತ ಸಮೂಹದಿಂದ ಕರೆಸಿಕೊಂಡಿದ್ದರು.ಮನುಕುಲದ ಅಭಿವೃದ್ಧಿಗೆ ಶ್ರಮಿಸಿದ ಶ್ರೇಷ್ಠ ಸಂತರಾಗಿದ್ದರು ಎಂದು ಸ್ಮರಿಸಿದರು.
    ಕಸಾಪ ಜಿಲ್ಲಾ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ ಸಾಮಾನ್ಯ ವ್ಯಕ್ತಿಯಂತೆ ಬದುಕು ನಡೆಸಿದ್ದ ಸಿದ್ದೇಶ್ವರ ಸ್ವಾಮೀಜಿ, ಪದ್ಮಶ್ರೀ, ಗೌರವ ಡಾಕ್ಟರೇಟ್ ಮೊದಲಾದ ಪ್ರಶಸ್ತಿಗಳನ್ನು ನಿರಾಕರಿಸಿ, ಜನರನ್ನು ಸನ್ಮಾರ್ಗದಲ್ಲಿ ನಡೆಸುವುದನ್ನೇ ಬದುಕಿನ ಪರಮ ಗುರಿಯಾಗಿರಿಸಿಕೊಂಡಿದ್ದ ಅಪರೂಪದ ಸ್ವಾಮೀಜಿಯಾಗಿದ್ದರು ಎಂದರು.
    ರಂಗಕರ್ಮಿ ಬಾ.ಮ.ಬಸವರಾಜಯ್ಯ ಮಾತನಾಡಿ ಜಾಗತಿಕ ದಾರ್ಶನಿಕರ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದ ಶ್ರೀಗಳು ದೃಷ್ಟಾಂತ, ಉದಾಹರಣೆಗಳೊಂದಿಗೆ ಕೇಳುಗರ ಮನಮುಟ್ಟುವಂತೆ ಪ್ರವಚನವನ್ನು ಸರಳವಾಗಿ ಬೋಧಿಸುತ್ತಿದ್ದರು ಎಂದರು.
    ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ಕನ್ನಡ-ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿದರು.
    ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸ್ಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಎ.ಮಹಾಲಿಂಗಪ್ಪ, ಎ.ಬಿ.ರಾಮಚಂದ್ರಪ್ಪ, ರಂಗಕರ್ಮಿ ಸಿದ್ದರಾಜು, ಕೆ.ಎನ್.ಸ್ವಾಮಿ, ರುದ್ರಾಕ್ಷಿ ಬಾಯಿ, ಸತ್ಯಭಾಮ ಮಂಜುನಾಥ್, ಭೈರವೇಶ್ವರ, ದಾಗಿನಕಟ್ಟೆ ಪರಮೇಶ್ವರಪ್ಪ, ಬೇತೂರು ಷಡಾಕ್ಷರಪ್ಪ, ಪರಿಮಳಾ ಜಗದೀಶ್, ಸೌಭಾಗ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts