More

    ಸರಳ ಬದುಕು ಆದರ್ಶಪ್ರಾಯ

    ಕುಶಾಲನಗರ: ಸಿದ್ಧೇಶ್ವರ ಶ್ರೀಗಳ ಸರಳ ಬದುಕು ಆದರ್ಶಪ್ರಾಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು.

    ವಿಜಯಪುರದ ಲಿಂಗೈಕ್ಯ ಸಿದ್ಧೇಶ್ವರ ಶ್ರೀಗಳ ಗೌರವಾರ್ಥ ಕಸಾಪ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಅವರು ಮಾತನಾಡಿ, ಶ್ರೀಗಳು ಸದಾ ಶ್ವೇತ ವಸ್ತ್ರಧಾರಿಗಳಾಗಿ ನಿತ್ಯವೂ ಪ್ರವಚನಗಳ ಮೂಲಕ ಸಹಸ್ರಾರು ಭಕ್ತರ ಬದುಕನ್ನು ಪರಿವರ್ತಿಸಿದ್ದರು. ಭಕ್ತರ ಪಾಲಿಗೆ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದರು ಎಂದು ಬಣ್ಣಿಸಿದರು.

    ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಭಕ್ತರ ಪಾಲಿನ ನಿಜದೈವ ಸಿದ್ಧೇಶ್ವರ ಶ್ರೀಗಳು ಬುದ್ಧ, ಬಸವ, ಗಾಂಧೀಜಿ ಮೊದಲಾದ ರಾಷ್ಟ್ರ ಪುರುಷರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು. ಅವರು ಸಮಯಕ್ಕೆ ಮೌಲ್ಯ ನೀಡಿ ನಿತ್ಯ ಬೆಳಗ್ಗೆ ಆಶ್ರಮದ ಆವರಣದಲ್ಲಿ ನೀಡುತ್ತಿದ್ದ ಪ್ರವಚನಕ್ಕೆ ಭಕ್ತರ ದಂಡೇ ಕಾದಿರುತ್ತಿತ್ತು. ಅವರ ಅಗಲಿಕೆಯಿಂದ ಭಕ್ತ ಸಮೂಹ ಬಡವಾಗಿದೆ ಎಂದರು.

    ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ವಿಜೇತ್, ಹೆಬ್ಬಾಲೆ ಹೋಬಳಿ ಕಸಾಪ ಅಧ್ಯಕ್ಷ ಮಣಜೂರು ಮಂಜುನಾಥ, ಪದಾಧಿಕಾರಿಗಳಾದ ಮೊಹಿದ್ದೀನ್, ಡೆನ್ನಿಸ್ ಡಿಸೋಜ, ಫ್ಯಾನ್ಸಿ ಮುತ್ತಣ್ಣ, ನಾಗರಾಜು, ಪ್ರೊ.ಲಿಂಗಮೂರ್ತಿ, ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ ಪೂಜಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts