More

    ಸರಕಾರಿ ಕಾಮಗಾರಿ ವಿಳಂಬ ಸಲ್ಲದು


    ಯಾದಗಿರಿ: ಸರಕಾರಿ ಕಾಮಗಾರಿಗಳು ವರ್ಷಾನುಗಟ್ಟಲೆವಿಳಂಬವಾಗಿ ಸಾಗುತ್ತಿದ್ದು, ಇದರಿಂದ ಅನುದಾನ ಬಳಕೆಯಾಗದೆ ಸಕರ್ಾರಕ್ಕೆ ವಾಪಸ್ ಹೋಗುತ್ತಿದೆ. ಹೀಗಾಗಿ ಅಧಿಕಾರಿಗಳು ಮತುವಜರ್ಿ ವಹಿಸಿ ಕೆಲಸ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸೂಚನೆ ನೀಡಿದರು.


    ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮುಂದುವರೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾಸಭೆಯಲ್ಲಿ ಮಾತನಾಡಿ, ಅಂಗನವಾಡಿ ಕಟ್ಟಡ ಕಾಮಗಾರಿಗಳು ವಿಳಂಬವಾಗಿ ಸಾಗುತ್ತಿದ್ದು, ಕೂಡಲೇ ಪೂರ್ಣಗೊಳಿಸಬೇಕು ಎಂದರು. ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಭೂಸೇನಾ ನಿಗಮ ಮತ್ತು ನಿಮರ್ಿತಿ ಕೇಂದ್ರದವರಿಗೆ ಅತೀಹೆಚ್ಚು ಕಾಮಗಾರಿ ಕೊಟ್ಟಿದ್ದೇವೆ. ಯಾವ ಕಾಮಗಾರಿ ಸಹ ಪೂರ್ಣಗೊಳಿಸಿಲ್ಲ. ಗುತ್ತಿಗೆದಾರರು ಟೆಂಡರ್ನಲ್ಲಿ ತೀರಾ ಲೆಸ್ ಹಾಕಿ ಕೆಲಸ ಪಡೆಯುತ್ತಾರೆ. ಇದರಿಂದ ಕಾಮಗಾರಿ ಗುಣಮಟ್ಟವಾಗಿ ಆಗುವುದಿಲ್ಲ ಎಂಬ ಕಾರಣಕ್ಕೆ ನಿಮಗೆ ಕೊಟ್ಟಿದ್ದೇವೆ. ವರ್ಷಾನುಗಟ್ಟಲೆವಿಳಂಬ ಮಾಡಿದರೆ ನಾವು ಜನರಿಗೆ ಏನು ಉತ್ತರ ಕೊಡಬೇಕು? ಎಂದು ಪ್ರಶ್ನಿಸಿದರು.


    ಕೆಂಭಾವಿ, ಗೋನಾಲ, ಹೆಬ್ಬಾಳ( ಕೆ), ಕೆಂಭಾವಿ, ಮಲ್ಕಪ್ಪನಹಳ್ಳಿ, ಕುಂಟಿಮರಿ ಗ್ರಾಮಗಳಲ್ಲಿ ಕೆಲ ಅಂಗನವಾಡಿ ಕಾಮಗಾರಿಗಳು ಸಣ್ಣಪುಟ್ಟ ಸಮಸ್ಯೆಗಳಿದ್ದು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಸಭೆ ಗಮನಕ್ಕೆ ತಂದರು.
    ಸಚಿವ ದರ್ಶನಾಪುರ, ಒಂದು ಕಾಮಗಾರಿ ಆರಂಭಿಸಿ, ಅರ್ಧಕ್ಕೆ ಬಿಟ್ಟು ಮತ್ತೊಂದು ಚಾಲೂ ಮಾಡ್ತೀರಿ. ಇದರಿಂದ ಎಲ್ಲವೂ ಅಪೂರ್ಣ ಆಗುತ್ತಿವೆ ಎಂದಾಗ, ಕಳೆದ ಸರಕಾರದಲ್ಲಿ ಕೆಲವರು ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಆಪೇಕ್ಷಣೆ ಇಲ್ಲ. ಆದರೆ, ಅಧಿಕಾರಿಗಳಾದವರೂ ಶಾಸಕರ ಗಮನಕ್ಕೆ ತರಬೇಕಲ್ಲವೇ ಎಂದರು.


    ಅಧಿಕರಿಗಳಾದವರು ಆಯಾ ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಶಾಸಕರಿಗೆ ಸಭೆ ಮುಂಚೆ ಮಾಹಿತಿ ಕೊಡುವುದಿಲ್ಲ. ಪ್ರತಿ ಸಭೆಯಲ್ಲಿ ಮಾಹಿತಿ ಕೊಡಿ ಎಂದು ಕೇಳಿ ನಮಗೆ ನಾಚಿಕೆಯಾಗುತ್ತಿದೆ. ಆನೂರು-ಚಿಗಾನೂರ ಬಳಿಯ ಬ್ಯಾರೇಜ್ ಗೇಟ್ಗಳು ತುಕ್ಕು ಹಿಡಿದು ನೀರು ಪೋಲಾಗುತ್ತಿದೆ. ಈ ಬ್ಯಾರೇಜ್ ಯಾದಗಿರಿ ಮತ್ತು ಗುರಮಠಕಲ್ ಕ್ಷೇತ್ರಗಳ ವ್ಯಾಪಿಗೆ ಬರುತ್ತದೆ. ಬರುವ ದಿನಗಳಲ್ಲಿ ನೀರಿಗಾಗಿ ನಾವು ಸಕರ್ಾರದ ಮೇಲೆ ಒತ್ತಡ ಹಾಕಬೇಕಾಗುತ್ತದೆ ಎಂದು ಕಂದಕೂರ ತಿಳಿಸಿದರು.


    ಬ್ಯಾರೇಜ್ನ ಗೇಟ್ಗಳು ಹಾಳಾಗಿದ್ದು, ಹೊಸ ಗೇಟ್ ಅಳವಡಿಕೆಗೆ 56 ಕೋಟಿ ರೂ.ಅನುದಾನ ಬೇಕಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಉತ್ತರಿಸಿದರು. ಪಿಎಂಜಿಎಸ್ವೈ ಯೋಜನೆಯ ರಸ್ತೆಗಳು ಮೂನರ್ಾಲ್ಕು ವರ್ಷಗಳಿಂದ ವಿಳಂಬವಾಗಿ ನಡೆಯುತ್ತಿವೆ. ಕೂಡಲೇ ಪೂರ್ಣಗೊಳಿಸಬೇಕು ಎಂದು ಸಚಿವರು ತಾಕೀತು ಮಾಡಿದರು.


    ಕ್ರೀಡಾ ಇಲಾಖೆಯಿಂದ ಪ್ರತಿವರ್ಷ ಎಷ್ಟು ಅನುದಾನ ಬಂದಿದೆ ಹಾಗೂ ಯಾವ ಶಾಲೆಗಳಿಗೆ ಕಿಟ್ಗಳನ್ನು ವಿತರಿಸಿದ್ದೀರಿ ಎಂದು ಸಚಿವರು ಪ್ರಶ್ನಿಸಿ, ಜಿಲ್ಲಾ ಕ್ರೀಡಾಂಗಳಲ್ಲಿ ಮೂಲಸೌಲಭ್ಯ ಇಲ್ಲದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದರು. ಶಾಸಕ ಚನ್ನಾರಡ್ಡಿ ಪಾಟೀಲ್, ಕ್ರೀಡಾ ಇಲಾಖೆ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ಕೇಳಿದರೂ ಕೊಡುತ್ತಿಲ್ಲ ಎಂದು ಹರಿಹಾಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts