More

    ಸಮ್ಮೇದ್ ಶಿಖರ್ಜಿ ಪ್ರವಾಸಿ ತಾಣವಾಗದಿರಲಿ

    ಸಾಲಿಗ್ರಾಮ: ಜೈನರ ಪುಣ್ಯಕ್ಷೇತ್ರ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಪಟ್ಟಣದ ಜೈನ ಸಮುದಾಯದವರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಜೈನರ 24 ತೀರ್ಥಂಕರರಲ್ಲಿ 20 ತೀರ್ಥಂಕರರು ಮೋಕ್ಷ ಪಡೆದ ಅತ್ಯಂತ ಪವಿತ್ರ ಸ್ಥಳ ಜಾರ್ಖಂಡ್‌ನ ಗಿರಡಿ ಜಿಲ್ಲೆಯ ಸಮ್ಮೇದ್ ಶಿಖರ್ಜಿ. ಇಂತಹ ಕ್ಷೇತ್ರವನ್ನು ಸರ್ಕಾರ ಪ್ರವಾಸಿ ತಾಣವಾಗಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ನೇಮಿನಾಥ ತೀರ್ಥಂಕರರ ಚೈತ್ಯಾಲಯದಲ್ಲಿ 108 ಆರ್ಯಿಕಾ ಸಮ್ಯಕ್ ಶ್ರೀ ಮಾತಾಜಿ ಅವರ ಆಶೀರ್ವಾದ ಪಡೆದ ಬಳಿಕ ಪೂಜಾ ದೀದಿ ಅವರೊಂದಿಗೆ ಜೈನ ಶ್ರಾವಕ, ಶ್ರಾವಕಿಯರು ಮೆರವಣಿಗೆ ಮೂಲಕ ತಾಲೂಕು ಕಚೇರಿ ತಲುಪಿದರು. ನಂತರ ತಹಸೀಲ್ದಾರ್ ಮೋಹನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

    ಜೈನ ಸಮಾಜದ ಮುಖಂಡರಾದ ರಾಜೇಂದ್ರಪ್ರಸಾದ್, ಸುನಿಲ್ಕುಮಾರ್, ಹೇಮಂತ್‌ಕುಮಾರ್, ಗುಣಪಾಲ್ ಜೈನ್, ರಜತ್‌ಜೈನ್, ನೇಮಿಚಂದ್ರ , ಸುರೇಶ್‌ಕುಮಾರ್, ಸುಜಾತಾ, ನೀರಜ, ಶ್ರೀಕೃಪ, ಪ್ರತಿಮಾ, ಜ್ಯೋತಿ ಜಯಸೇನ, ಗೀತಾ, ರಾಜಕುಮಾರಿ, ರಜನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts