More

    ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ

    ಮುನವಳ್ಳಿ: ಸವದತ್ತಿಯಲ್ಲಿ ಡಿ. 19 ರಂದು ಸವದತ್ತಿಯಲ್ಲಿ ಜರುಗಲಿರುವ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ಪಟ್ಟಣದ ಸೋಮಶೇಖರಮಠದಲ್ಲಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ಪೂರ್ವಭಾವಿ ಸಂಘಟನಾ ಸಭೆ ಜರುಗಿತು.

    ಪಂಚಮಸಾಲಿ ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಸರ್ಕಾರ ಕೊಡಬೇಕು. ಸವದತ್ತಿಯಲ್ಲಿ ಡಿ.19 ರಂದು ಜರುಗುವ ಬೃಹತ್ ಸಮಾವೇಶಕ್ಕೆ ಸಮುದಾಯದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

    ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಕೂಡಲಸಂಗಮಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಅಂತಿಮ ಹಂತ ತಲುಪಿದೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಗುವ ವಿಶ್ವಾಸವಿದ್ದು, ಅಕಸ್ಮಾತ ನ್ಯಾಯ ದೊರಕದೇ ಇದ್ದಲ್ಲಿ ಸವದತ್ತಿಯಿಂದ ಪಾದಯಾತ್ರೆ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ತೆರಳಿ ಡಿ. 22 ರಂದು ಪ್ರತಿಭಟನೆ ಮಾಡಲಾಗುವುದು. ಸುಮಾರು 25 ಲಕ್ಷ ಪಂಚಮಸಾಲಿಗಳು ಈ ಹೋರಾಟದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಲಿದ್ದಾರೆ ಎಂದರು.

    ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ. ಬಸವರಾಜ ಕಾರದಗಿ, ವಿರೂಪಾಕ್ಷ ಮಾಮನಿ, ಅಲ್ಲಮಪ್ರಭು ಪ್ರಭುನವರ,ಸುನೀಲ ಮಾಮನಿ, ಸುರೇಶ ಬಡಗಿಗೌಡ್ರ, ಸುರೇಶ ಜಾವೂರ ಮುನವಳ್ಳಿ ಪುರಸಭೆ ಸದಸ್ಯರಾದ ಸುಭಾಸ ಗೀದಿಗೌಡ್ರ, ಪ್ರಕಾಶ ನಲವಡೆ, ಗುರುಶಾಂತ ಚಂದರಗಿ, ರಮೇಶ ಗಂಗನ್ನವರ, ಸಂತೋಷ ಗೋಕಾಕ, ಮಲ್ಲಿಕಾರ್ಜುನ ಕಮತಗಿ, ವಿನೋದ ಕಳಸನಗೌಡ್ರ, ಕಲ್ಲಪ್ಪ ನಲವಡೆ, ಮಲ್ಲಣ್ಣ ಹನಸಿ, ಸಂಗಪ್ಪ ಹೂಲಿ, ಪಂಚಪ್ಪ ಹನಸಿ, ಪಂಚು ಕಳಸನಗೌಡ್ರ, ರುದ್ರಗೌಡ ಕಳಸನಗೌಡ್ರ, ಚನ್ನಪ್ಪ ದ್ಯಾಮನಗೌಡರ, ಶಿವಾನಂದ ಮೇಟಿ, ವೀರು ಗೀದಿಗೌಡ್ರ, ಬಾಳು ಹೊಸಮನಿ, ಸಂಗಪ್ಪ ಬಿಕ್ಕನಗೌಡ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts