More

    ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ

    ಕುಕನೂರು: ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿ ಮೀಸಲಿಗೆ ಒಳಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಸಮಾಜದ ರಾಜ್ಯ ಸಮಿತಿ ಸದಸ್ಯ ರಾಮು ಕೌದಿ ಹೇಳಿದರು.

    ಇದನ್ನೂ ಓದಿ: ಜ.28ರಂದು ಚಿತ್ರದುರ್ಗದಲ್ಲಿ ಜಾಗೃತಿ ಸಮಾವೇಶ: ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಮಾಹಿತಿ

    ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿರುವ ಕೋಲಿ, ಕಬ್ಬಲಿಗ ಹಾಗೂ ಅಂಬಿಗ ಸಮುದಾಯದವರು ಜಲಬೇಟೆಗಾರರಾಗಿದ್ದು, ಎಸ್ಟಿ ಮೀಸಲಾತಿಗೆ ಒಳಪಡುತ್ತಾರೆ. ಕಳೆದ 40 ವರ್ಷಗಳಿಂದ ಎಸ್ಟಿ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ.

    ಸಮಾಜದಲ್ಲಿರುವ ಬಾರಕೇರ, ಬೆಸ್ತ, ಕೋಲಿ, ಕಬ್ಬಲಿಗ ಮತ್ತು ಅಂಬಿಗ ಸೇರಿ ಗಂಗಾಮತ ಸಮಾಜ ಎಂದು ಕರೆದುಕೊಂಡಿದ್ದೇವು. ಅದೇ ಹೆಸರಿನಿಂದ ನಮಗೆ ಮೀಸಲಾತಿ ನೀಡುವುದಕ್ಕೆ ಸಮಸ್ಯೆಯಾಯಿತು. ಇತರ ರಾಜ್ಯಗಳಲ್ಲಿ ಎಸ್ಟಿ ಮೀಸಲಾತಿ ಪ್ರಮಾಣಪತ್ರ ಕೆಲವರು ಪಡೆದುಕೊಂಡಿದ್ದಾರೆ.

    ಕಲಬುರುಗಿಯಲ್ಲಿ ಫೆ.25ರಂದು ಎಸ್ಟಿ ಸೇರ್ಪಡೆ ಹಾಗೂ ಜಾಗೃತಿ ಸಮಾವೇಶ ನಡೆಯಲಿದೆ. ಜಿಲ್ಲೆಯಿಂದ ಸಮಾಜದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

    ಸಮುದಾಯದ ಪ್ರಮುಖರಾದ ಶಿವಪುತ್ರಪ್ಪ ಮಡ್ಡಿ, ಬಾಳಪ್ಪ ಬಾರಕೇರ್, ಬುಡ್ಡಪ್ಪ ಬಾರಕೇರ್, ಬಸವರಾಜ ಕೋನಾರಿ, ಮಂಜುನಾಥ ಬಾರಕೇರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts