More

    ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಿ

    ಬೈಲಹೊಂಗಲ, ಬೆಳಗಾವಿ: ಪಟ್ಟಣದಲ್ಲಿ ಡಿ.5ರಂದು ಜರುಗಲಿರುವ ಪಂಚಮಸಾಲಿ ಸಮಾವೇಶಕ್ಕೆ ಸಮುದಾಯವರು ಬೃಹತ್ ಪ್ರಮಾಣದಲ್ಲಿ ಸೇರಿ ಸರ್ಕಾರಕ್ಕೆ ಸಂದೇಶ ರವಾನಿಸಬೇಕು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

    ಸಮೀಪದ ಮರಕುಂಬಿ ಗ್ರಾಮದ ಅಡವಿಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 2ಎ ಮೀಸಲಾತಿಗಾಗಿ ಎಲ್ಲ ಪಂಚಮಸಾಲಿಗರು ಸರ್ಕಾರದ ಮೇಲೆ ನಿರಂತರ ಒತ್ತಡ ತರವುದು ಅಗತ್ಯವಾಗಿದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.

    ಯುವ ಮುಖಂಡ ಕಾರ್ತಿಕ ಪಾಟೀಲ ಮಾತನಾಡಿದರು. ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ತಾಲೂಕಾಧ್ಯಕ್ಷ ಶ್ರೀಶೈಲ ಬೋಳನ್ನವರ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮಹಾಂತೇಶ ತುರಮರಿ, ಮಹೇಶ ಹರಕುಣಿ, ಶಂಕರ ಮಾಡಲಗಿ, ಎ್.ಎಸ್. ಸಿದ್ಧನಗೌಡರ, ಮಾಜಿ ಗ್ರಾಪಂ ಅಧ್ಯಕ್ಷ ಸುರೇಶ ಮುರಗೋಡ, ಮುರುಗೇಶ ಗುಂಡ್ಲೂರ, ಶ್ರೀಕಾಂತ ಶಿರಹಟ್ಟಿ, ಬಸಪ್ಪ ಚಿಕ್ಕೂಪ್ಪ, ಶ್ರೀಕಾಂತ ಸುಂಕದ, ಮಹಾಂತೇಶ ಚಳಕೊಪ್ಪ, ವೀರಭದ್ರಪ್ಪ ಚಿಕ್ಕೂಪ್ಪ, ಸೋಮನಿಂಗ ಭಟ್ಟಿ, ಮಹಾಂತೇಶ ಹೊಂಗಲ, ಸುರೇಶ ಅಂಗಡಿ, ಬಸವರಾಜ ಚಿಕ್ಕೊಪ್ಪ, ಶಿವಾನಂದ ಹೊಂಗಲ, ಉಳವಪ್ಪ ಚಿಕ್ಕೊಪ್ಪ, ವಿಠ್ಠಲ ಅಂದಾನಿ, ಶ್ರೀಶೈಲ ಯಡಳ್ಳಿ, ಚಂದನ ಕೌಜಲಗಿ, ಉಳವಪ್ಪ ಕೌಜಲಗಿ, ಮಹಾಂತೇಶ ಕೌಜಲಗಿ, ರವಿ ಕುರಬೆಟ್ಟ, ಶಿವಾನಂದ ಗುರಕನವರ, ಮಲ್ಲಿಕಾರ್ಜುನ ಗುರಕನವರ, ಬಸವರಾಜ ಮುರ್ಕಿಬಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts