More

    ಸಮಾಜವನ್ನು ತಿದ್ದಿದ ದೇವರ ದಾಸಿಮಯ್ಯ

    ಕೆ.ಆರ್.ನಗರ: ದೇವರ ದಾಸಿಮಯ್ಯ ಅವರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿ ಶಾಂತಿಯುತವಾಗಿ ಬದುಕು ನಡೆಸಲು ಆದರ್ಶಪ್ರಾಯರಾಗಿದ್ದರು ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್ ಹೇಳಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ, ತಾಲೂಕು ನೇಕಾರ

    ಸಮುದಾಯ ಒಕ್ಕೂಟ ಹಾಗೂ ಅಗ್ನಿವಂಶ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಚನಕಾರ ಶ್ರೀ ದೇವರದಾಸಿಮಯ್ಯ ಜಯಂತಿ ಹಾಗೂ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಸಮಾಜದಲ್ಲಿ ತಪ್ಪು ಮಾಡುವವರಿಗೆ ವಚನಗಳು ಪೆಟ್ಟು ನೀಡುವಂತೆ ತಪ್ಪು ತಿದ್ದುವ ಮೂಲಕ ಎಚ್ಚರಿಸುವ ಕೆಲಸವನ್ನೂ ಮಾಡಿದರು. ದೇವರದಾಸಿಮಯ್ಯ ಹಾಗೂ ಅಗ್ನಿ ಬನ್ನಿರಾಯಸ್ವಾಮಿ ಅವರಂಥವರ ತತ್ವ, ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.

    ರಾಜ್ಯದ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಯಂತಿಗಳನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
    ತಾಲೂಕು ನೇಕಾರ ಸಮುದಾಯ ಒಕ್ಕೂಟದ ಅಧ್ಯಕ್ಷ ಗಣೇಶ್ ಮಾತನಾಡಿ, ದಾಸಿಮಯ್ಯನವರು 11-12ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದ ಮೊದಲ ವಚನಕಾರರಾಗಿದ್ದು, ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

    ತಾಪಂ ಇಒ ಎಚ್.ಕೆ.ಸತೀಶ್, ಸಾಲಿಗ್ರಾಮ ತಹಸೀಲ್ದಾರ್ ತಿಮ್ಮಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಜೆ.ಅರುಣ್‌ಕುಮಾರ್, ತಾಲೂಕು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪರಮೇಶ್, ಉಪಾಧ್ಯಕ್ಷ ಪಿ.ನಟರಾಜ್, ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಮಾ, ತಾಲೂಕು ನೇಕಾರ ಸಮುದಾಯ ಒಕ್ಕೂಟದ ಸದಸ್ಯರಾದ ವೆಂಕಟೇಶ್, ಕುಮಾರ್, ಕಾಂತರಾಜ್, ಗೋವಿಂದರಾಜ್, ಮೋಹನ್, ರಾಜೇಂದ್ರ, ಅಶೋಕ್, ಪ್ರದೀಪ್, ಶಿವು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts