More

    ಸಮಾಜದ ಒಳಿತಿಗಾಗಿ ರಾಜೇಂದ್ರ ಶ್ರೀಗಳ ಜೀವನ ಮುಡಿಪು

    ನಂಜನಗೂಡು: ಕಷ್ಟದ ಪರಿಸ್ಥಿತಿಯಲ್ಲೂ ತ್ರಿವಿಧ ದಾಸೋಹವನ್ನು ವ್ರತವನ್ನಾಗಿಸಿಕೊಂಡು ಸಮಾಜದ ಒಳಿತಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣೆ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಹೇಳಿದರು.


    ನಗರದ ಜೆಎಸ್‌ಎಸ್ ಪಾಲಿಟೆಕ್ನಿಕ್‌ನಲ್ಲಿ ಗುರುವಾರ ಆಯೋಜಿಸಿದ್ದ ರಾಜಗುರು ತಿಲಕ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನ ಒಳಿತಿಗಾಗಿ ನಾವೇನು ಮಾಡಬೇಕೆಂಬ ಸೂಕ್ಷ್ಮ ಸಂವೇದನೆ ಹೊಂದಿದ್ದ ರಾಜೇಂದ್ರ ಶ್ರೀಗಳು ಸಮಾಜವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾದರು. ಶಿಕ್ಷಣ, ದಾಸೋಹ, ಆಶ್ರಯ ನೀಡುವ ಮೂಲಕ ಭವಿಷ್ಯದ ಮಕ್ಕಳಿಗೆ ನೆರವಾದರೆ ಬಡತನ, ಅನಕ್ಷರತೆ ನಿವಾರಣೆ ಮಾಡಬಹುದಾಗಿದೆ ಎಂಬುದನ್ನು ಅರಿತು ತ್ರಿವಿಧ ದಾಸೋಹವನ್ನು ತಮ್ಮ ಜೀವನದುದ್ದಕ್ಕೂ ವ್ರತವನ್ನಾಗಿ ಮಾಡಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯದಾತರಾದರು ಎಂದು ಬಣ್ಣಿಸಿದರು.


    ಮೈಸೂರಿನ ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ ನುಡಿ ನಮನ ಸಲ್ಲಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಶಿರಾ ಹವ್ಯಾಸಿ ಭಜನಾ ತಂಡ ವಚನ ಗಾಯನ ನಡೆಸಿಕೊಟ್ಟಿತು. ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್.ಶ್ರೀನಿವಾಸ್, ಪ್ರಾಂಶುಪಾಲ ವಿದ್ಯಾಶಂಕರ್, ಉಪನ್ಯಾಸಕರಾದ ಕೆ.ಪಿ.ವಿಜಯಕುಮಾರ್, ಎಂ.ಆರ್.ವಿಶ್ವನಾಥ್, ಸೌಮ್ಯಾ, ಡಾ.ಜೆ.ಕೆ.ಸದಾಶಿವ, ಶೈಲೇಂದ್ರ, ಪ್ರಭುಸ್ವಾಮಿ ಸೇರಿದಂತೆ ಇತರರಿದ್ದರು.


    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts