More

    ಸಮಾಜದ ಏಳಿಗೆಗೆ ಶ್ರಮಿಸುವ ಪತ್ರಕರ್ತರು, ಶ್ರೀ ಸಿದ್ದಲಿಂಗ ಸ್ವಾಮೀಜಿ ಬಣ್ಣನೆ, ನೆಲಮಂಗಲದಲ್ಲಿ ಪತ್ರಿಕಾ, ಪ್ರತಿಕಾ ವಿತರಕರ ದಿನಾಚರಣೆ

    ನೆಲಮಂಗಲ: ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯವಾದದ್ದು ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

    ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಸಮಿತಿ ಗುರುವಾರ ಆಯೋಜಿಸಿದ್ದ ಪತ್ರಿಕಾ ಹಾಗೂ ಪತ್ರಿಕಾ ವಿತಕರ ದಿನಾಚರಣೆಯಲ್ಲಿ ಮಾತನಾಡಿದರು.

    ಗ್ರಾಮೀಣ ಭಾಗದಲ್ಲಿ ನಡೆಯುವ ಸಣ್ಣ ಘಟನೆಗಳಿಂದ ಹಿಡಿದು ದೇಶ, ಅಂತಾರಾಷ್ಟ್ರೀಯಮಟ್ಟದ ಘಟನೆಗಳನ್ನು ವರದಿ ಮಾಡುವ ಜತೆಗೆ ಸಮಸ್ಯೆಗಳನ್ನು ಸರ್ಕಾರಗಳ ಗಮನಕ್ಕೆ ತರುವಲ್ಲಿ ಮಾಧ್ಯಮದವರ ಕೆಲಸ ಅದ್ವಿತೀಯವಾದದ್ದು ಎಂದರು.

    ಡಿ.ವಿ. ಗುಂಡಪ್ಪ ಅವರಿಂದ ಸ್ಥಾಪನೆಯಾದ ಸಂಘಟನೆಗೆ 90 ವರ್ಷದ ಇತಿಹಾಸವಿದೆ. ಸಂಘದ ಸದಸ್ಯರ ಹಿತ ಕಾಪಾಡುವ ಜತೆಗೆ ಸಾಮಾಜಿಕ ಕಳಕಳಿಯ ಕಾರ್ಯ ಮಾಡುತ್ತಿರುವ ಸಂಘಟನೆಯ ಕಾರ್ಯ ಅಭಿನಂದನೀಯ. ಪ್ರತಿವರ್ಷವೂ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲಿ ಎಂದು ಹಾರೈಸಿದರು.

    ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಬೆಳಗಿನಜಾವ ಎದ್ದು ದಿನಪ್ರತಿಕೆಗಳನ್ನು ಮನೆಮನೆಗೆ ತಲುಪಿಸುವ ಪ್ರತಿಕಾ ವಿತರಕರನ್ನು ಸರ್ಕಾರ ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಬೇಕಿದೆ. ಪ್ರತಿಯೊಬ್ಬರೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ತಾಲೂಕಿನ ವಿವಿಧ ಪ್ರಯೋಗಾಲಯಗಳ 20 ತಜ್ಞರನ್ನು ಸನ್ಮಾನಿಸಲಾಯಿತು. 80 ಪ್ರತಿಕಾವಿತರಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ಕೋವಿಡ್ ಸಂದರ್ಭದಲ್ಲಿ ಉಚಿತವಾಗಿ ಆಂಬುಲೆನ್ಸ್ ಸೌಲಭ್ಯ ಒದಗಿಸಿದ ಐವರು ದಾನಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಪೊಲೀಸ್ ಸಿಬ್ಬಂದಿ ಜೈಪ್ರಕಾಶ್, ಶ್ರೀನಿವಾಸ್, ಗೃಹರಕ್ಷಕ ಸಿಬ್ಬಂದಿ ಶಬ್ಬೀರ್, ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಅಗ್ನಿಶಾಮಕದಳದ ಲಕ್ಷ್ಮೀನರಸಿಂಹಯ್ಯ ಅವರನ್ನು ಗೌರವಿಸಲಾಯಿತು.

    ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಪತ್ರಿಕಾ ವಿತರಕರಿಗೆ ದಿನಸಿಕಿಟ್ ವಿತರಿಸಿದರು. ಮಾಜಿ ಶಾಸಕ ಎಂ.ವಿ. ನಾಗರಾಜು, ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಪಠ್ಯಸಾಮಗ್ರಿ ವಿತರಿಸಿದರು. ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪದ ಅಧ್ಯಕ್ಷ ಎಸ್. ಶಿವಕುಮಾರ್, ಬಿಜಿಪಿ ಮುಖಂಡ ಜಗದೀಶ್ ಚೌಧರಿ ಪತ್ರಕರ್ತರ ಸಂಘದ ಸದಸ್ಯರಿಗೆ ಆರೋಗ್ಯ ಮಿತ್ರ ಬಾಂಡ್ ವಿತರಿಸಿದರು.
    ಸ್ಪಾರ್ಕಲ್ ಡಾನ್ಸ್ ಆ್ಯಂಡ್ ಫಿಟ್‌ನೆಸ್ ಸ್ಟುಡಿಯೋ ಸದಸ್ಯರು ನೃತ್ಯ ಪ್ರದರ್ಶಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಅಧ್ಯಕ್ಷ ಆರ್. ಪ್ರಮೋದ್‌ಕುಮಾರ್, ನೆ.ಯೋ. ಪ್ರಾಧಿಕಾರ ಅಧ್ಯಕ್ಷ ಎಸ್. ಮಲ್ಲಯ್ಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ. ರಾಮಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ಹೊಂಬಯ್ಯ, ರಾಜ್ಯ ಅನುಸೂಚಿತ ಜಾತಿ ಬುಡಕಟ್ಟು ಆಯೋಗದ ಸದಸ್ಯ ದೊಡ್ಡೇರಿ ವೆಂಕಟೇಶ್, ನಗರಸಭೆ ಸದಸ್ಯ ಎನ್. ಗಣೇಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಡಿಬೆಲೆ ರಾಜಣ್ಣ, ರಾಜ್ಯ ನಿರ್ದೇಶಕ ದೇವರಾಜು, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಗಂಗರಾಜ ಶಿರವಾರ, ಹೊಸಕೋಟೆ ತಾಲೂಕು ಅಧ್ಯಕ್ಷ ಎಚ್.ಎಂ. ಮುನಿರಾಜು, ನೆಲಮಂಗಲ ತಾಲೂಕು ಗೌರವಾಧ್ಯಕ್ಷ ಜಿ.ಕೆ. ಸುಗ್ಗರಾಜು, ಉಪಾಧ್ಯಕ್ಷ ಚಿಕ್ಕರಾಜು, ಪ್ರಧಾನಕಾರ್ಯದರ್ಶಿ ಅಭಿಷೇಕ್, ಕಾರ್ಯದರ್ಶಿ ಶಾಂತಕುಮಾರ್, ಖಜಾಂಚಿ ಮಹಂತೇಶ್ ಎಂ. ನೆಗಳೂರು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts