More

    ಸಮಾಜದ ಅಭಿವೃದ್ಧಿಗೆ ಹೋರಾಟ ಅನಿವಾರ್ಯ

    ಬೈಲಹೊಂಗಲ: ಸಂಘಟನೆ ಶಕ್ತಿ ನಮ್ಮಲ್ಲಿದ್ದರೆ ಮಾತ್ರ ಎಲ್ಲ ರಂಗದಲ್ಲಿ ಪ್ರಾಮುಖ್ಯ ದೊರೆಯಲು ಸಾಧ್ಯ ಎಂದು ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು. ಪಟ್ಟಣದ ವಿಜಯ ಸೋಷಿಯಲ್ ಕ್ಲಬ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಪ್ಪಾರ ಸಮಾಜದ ಸಮಾಲೋಚನೆ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮುದಾಯ ಉತ್ತಮ ರೀತಿಯಲ್ಲಿ ಬೆಳೆಯಲು ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಅನಿವಾರ್ಯವಾಗಿದೆ.

    ದೇಶದಲ್ಲಿ ಸುಮಾರು 10 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಉಪ್ಪಾರ ಸಮಾಜ ಎಸ್ಟಿ ಮೀಸಲಾತಿಗಾಗಿ ಹೋರಾಟ ನಡೆಸಿದೆ. ಮುಂದಿನ ದಿನಗಳಲ್ಲಿ ಬೀದರದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಮಾಡಿ ಸಮಾಜಕ್ಕೆ ಮೀಸಲಾತಿ ದೊರಕಿಸಿ ಕೊಡುವಲ್ಲಿ ಶ್ರಮಿಸೋಣ ಎಂದರು. ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಉಪ್ಪಾರ, ಕೆಪಿಸಿಸಿ ಸದಸ್ಯ ಅರ್ಜುನ ನಾಟಕವಾಡಿ ಮಾತನಾಡಿದರು.

    ಸಮಾಜದ ಪಿಕೆಪಿಎಸ್, ಗಾಪಂಗೆ ಆಯ್ಕೆಯಾದ ಸದಸ್ಯರನ್ನು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ರೈತಪರ ಹೋರಾಟಗಾರ ರೈತ ಸಂಘದ ತಾಲೂಕು ಉಪಾಧ್ಯಕ್ಷ ಬಸವರಾಜ ಉಪ್ಪಾರ ಅವರನ್ನು ಸನ್ಮಾನಿಸಲಾಯಿತು.

    ನಿವೃತ್ತ ಪೊಲೀಸ್ ಅಧಿಕಾರಿ, ಎ್.ಡಿ. ಮುರಗೋಡ, ಜಿಲ್ಲಾ ಉಪ್ಪಾರ ಸಂಘದ ಕಾರ್ಯದರ್ಶಿ ಬಿ.ಪಿ. ಮೇಲಮಟ್ಟಿ, ತಾಲೂಕು ಅಧ್ಯಕ್ಷ ಲಕ್ಷ್ಮಣ ಘಾಟಿನ, ಬಾಳಪ್ಪ ಮುದಕವಿ, ಬಸವರಾಜ ಆಯಟ್ಟಿ, ಬಾಲರಾಜ ಅಲಕನೋರಿ, ವಿನಾಯಕ ಮದಲಬಾವಿ, ರವಿ ಉಪ್ಪಾರ, ಶಂಭು ಮುಕಣ್ಣವರ, ರಾಜು ದಳವಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts