More

    ಸಮಾಜದಲ್ಲಿ ಸ್ತ್ರೀ ಶಿಕ್ಷಣ ನಿರ್ಣಾಯಕ

    ಕಲಬುರಗಿ: ಜ್ಞಾನ, ಉದ್ಯೋಗ, ಉನ್ನತಿ, ಆರೋಗ್ಯ ಮತ್ತು ಸಮಾಜ ಸುಧಾರಣೆಯಲ್ಲಿ ಮಹಿಳಾ ಶಿಕ್ಷಣ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಬಿ.ಕೆ.ತುಳಸಿಮಾಲಾ ಹೇಳಿದರು.

    ನಗರದ ಗೋದುತಾಯಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಕಲಾವಾಣಿ ವಿದ್ಯಾರ್ಥಿಗಳ ಸಂಘ ಶನಿವಾರ ಏರ್ಪಡಿಸಿದ್ದ ಅವ್ವ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಆಧಾರಿತ ಶಿಕ್ಷಣ ಬೇಕಿದೆ. ತಂತ್ರಜ್ಞಾನ ಯುಗದಲ್ಲಿ ಸಾಕ್ಷರತೆಯ ಜತೆ ಕೌಶಲ, ಪ್ರಾವಿಣ್ಯತೆ, ಸಾಮಥ್ರ್ಯ ಹಾಗೂ ದಕ್ಷತೆಯೂ ಜತೆಗಿರಬೇಕು ಎಂದರು.

    ಶಿಕ್ಷಣದ ಮೂಲಕ ದೇಶ, ಸಮಾಜಕ್ಕೆ ನಮ್ಮ ಕೊಡುಗೆ ನೀಡಬೇಕಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಜ್ಞಾನ ಆಧಾರಿತ ಚಟುವಟಿಕೆ ನಡೆಯಬೇಕು. ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪರಿಣತಿ ಸಾಧಿಸಬೇಕು ಎಂದು ಸಲಹೆ ನೀಡಿದರು.

    ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಸರ್ಕಾರಗಳು ಆಲೋಚಿಸುವುದಕ್ಕಿಂತ ಮುನ್ನವೇ ಪೂಜ್ಯ ದೊಡ್ಡಪ್ಪ ಅಪ್ಪ ಅವರು 1934ರಲ್ಲಿ ಮಹಿಳಾ ಶಾಲೆ ಆರಂಭಿಸಿದ್ದು ದಾಖಲೆಯೇ ಸರಿ. ಮಹಿಳೆಯರ ಶಿಕ್ಷಣಕ್ಕೆ ದೊಡ್ಡಪ್ಪ ಅಪ್ಪ, ಗೋದುತಾಯಿ ಅಪ್ಪ ಅವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಸ್ಮರಿಸಿದರು.

    ಶ್ರೀ ಡಾ.ಶರಣಬಸವಪ್ಪ ಅಪ್ಪ ನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದು, ಕಲಬುರಗಿಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತಾಯಿಸಿ ಶೈಕ್ಷಣಿಕ ಅಡಿಗಲ್ಲು ಹಾಕಿದರು. ಅದರ ಜತೆಗೆ ಸ್ವತಃ ವೈವಿಧ್ಯಮಯ ಶಾಲಾ-ಕಾಲೇಜು ಆರಂಭಿಸಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಕೊಂಡಾಡಿದರು.

    ನಾಲ್ಕು ದಶಕದ ಸೇವೆಗೆ ಸನ್ಮಾನ ಸಂಭ್ರಮ: ಗೋದುತಾಯಿ ಕಾಲೇಜಿನಲ್ಲಿ 40 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಅಟೆಂಡರ್ ಹಣಮಂತ ಅವರನ್ನು ಸಂಸ್ಥೆಯಿಂದ ವಿಶೇಷವಾಗಿ ಸನ್ಮಾನಿಸಿದ್ದು ಇಡೀ ಸಭಾಂಗಣದಲ್ಲಿ ಸಂಚಲನ ಮೂಡಿಸಿತು. ಹಣಮಂತ ಅವರ ಹೆಸರು ಕರೆಯುತ್ತಲೇ ವಿದ್ಯಾರ್ಥಿಗಳು ಚಪ್ಪಾಳೆಗಳ ಸುರಿಮಳೆಗೈದರು. ವಿದ್ಯಾರ್ಥಿ, ಉಪನ್ಯಾಸಕರು, ಸಿಬ್ಬಂದಿ, ಫೈಲ್, ಕುರ್ಚಿ ಹೀಗೆ ಏನೇ ಬೇಕಾದರೂ ತಕ್ಷಣಕ್ಕೆ ತಂದುಕೊಡುವ ಹಣಮಂತ ಅವರ ಸೇವೆಯನ್ನು ನಿರೂಪಕರು ವಿವರಿಸಿರುವುದು ಕಾಯಕ ಜೀವಿಯ ಮಹತ್ವ ಸಾರಿದಂತೆ ಕಂಡು ಬಂದಿತು. ಹಣಮಂತ ಅವರನ್ನು ಬಸವರಾಜ ದೇಶಮುಖ ಸನ್ಮಾನಿಸಿದರು.

    ಅವ್ವ ಪ್ರಶಸ್ತಿ ಪ್ರದಾನ: ಖ್ಯಾತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಅವ್ವ ಪ್ರಶಸ್ತಿಯನ್ನು ಶರಣಬಸವ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಡಾ.ದಾಕ್ಷಾಯಿಣಿ ಅಪ್ಪ ಇತರ ಗಣ್ಯರು ಪ್ರದಾನ ಮಾಡಿದರು. 21,000 ರೂ. ನಗದು, ಸ್ಮರಣಿಕೆ, ಶ್ರೀ ಶರಣಬಸವೇಶ್ವರರ ಪುತ್ಥಳಿಯನ್ನು ಪ್ರಶಸ್ತಿ ಒಳಗೊಂಡಿದೆ. ಚಿನ್ನದ ಪದಕ, ಹೆಚ್ಚಿನ ಅಂಕ ಪಡೆದ, ಅತ್ಯುತ್ತಮ ವರ್ತನೆ, ಗ್ರಂಥಾಲಯ ಬಳಕೆದಾರರು, ಹಿರಿಯ ವಿದ್ಯಾಥರ್ಿಗಳು, ನಿವೃತ್ತ ಉಪನ್ಯಾಸಕರು, ಹಿರಿಯ ಉಪನ್ಯಾಸಕರನ್ನು ಸಹ ಸನ್ಮಾನಿಸಲಾಯಿತು. ನೇಪಾಳದಲ್ಲಿ ದಾಸೋಹ ರತ್ನ ಪ್ರಶಸ್ತಿಗೆ ಭಾಜನರಾದ ಡಾ.ದಾಕ್ಷಾಯಿಣಿ ಅಪ್ಪ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

    ನಿಯತಕಾಲಿಕೆ ಬಿಡುಗಡೆ: ಗೋದುತಾಯಿ ಕಾಲೇಜಿನಿಂದ ಹೊರತರುವ `ಮುತ್ತೈದೆ’ ಮಾಸ ಪತ್ರಿಕೆ ಬಿಡುಗಡೆ ಮಾಡಲಾಯಿತು. ಜತೆಗೆ ವಿವಿಧ ವಿಭಾಗಗಳ ಮಹಿಳಾ ಲೋಕ, ನಾದ ಲೋಕ, ವಿಜ್ಞಾನ ಲೋಕ, ಜಾನಪದ ಲೋಕ, ಕಲಾ ಲೋಕ ಸೇರಿ ವಿವಿಧ ನಿಯತಕಾಲಿಕೆಗಳನ್ನು ಬಿಡುಗಡೆಗೊಳಿಸಲಾಯಿತು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts