More

    ಸಮಾಜದಲ್ಲಿ ಸಾಮರಸ್ಯ ಮೂಡಿಸಿದ ಸಂತ

    ಬೈಲಹೊಂಗಲ, ಬೆಳಗಾವಿ: ಕೀರ್ತನೆ ಮತ್ತು ಕೃತಿಗಳ ಮೂಲಕ ಜಾತಿ ಪದ್ಧತಿ ನಿವಾರಣೆಗಾಗಿ ಶ್ರಮಿಸಿ, ಸಮಾಜದಲ್ಲಿ ಸಾಮರಸ್ಯ ಮೂಡುವಂತೆ ಮಾಡಿದ ದಾಸಶ್ರೇಷ್ಠರು ಕನದಾಸ ಎಂದು ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ ಹೇಳಿದರು.

    ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಕನಕದಾಸ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸಮಾಜದಲ್ಲಿರುವ ಅಂಕುಡೊಂಕುಗಳನ್ನು ಸಾಹಿತ್ಯದ ಮೂಲಕ ತಿದ್ದಿದ ಕನಕದಾಸರ ಆದರ್ಶಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕೆಂದರು.

    ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಕನಕದಾಸರು ತಮ್ಮ ಜೀವನದಲ್ಲಿ ಸುಮಾರು 300ಕ್ಕಿಂತಲೂ ಹೆಚ್ಚು ಕೀರ್ತನೆಗಳನ್ನು ನಾಲ್ಕು ಕೃತಿಗಳನ್ನು ರಚಿಸಿ ತಮ್ಮ ಕೀರ್ತನೆಗಳಲ್ಲಿ ಭಕ್ತಿ ಪಾರಮ್ಯ ಮೆರೆದಿದ್ದಾರೆ. ಕನಕದಾಸರು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ ಎಂದರು.

    ಕನಕದಾಸ ಜಯಂತಿ ಅಂಗವಾಗಿ ಬೀರದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು.

    ಅಂಗನವಾಡಿ ಕುಂಭಮೇಳ, ಡೊಳ್ಳಿನ ಪದಗಳು ಮೆರವಣಿಗೆಗೆ ಕಳೆ ತಂದವು. ತಹಸೀಲ್ದಾರ್ ಸಭಾಭವನದಲ್ಲಿ ಕಾರ್ಯಕ್ರಮ ಜರುಗಿತು. ಉಪನ್ಯಾಸಕ ಬಸವರಾಜ ಪುರಾಣಿಕಮಠ ಉಪನ್ಯಾಸ ನೀಡಿದರು.
    ತಹಸೀಲ್ದಾರ್ ಬಸವರಾಜ ನಾಗರಾಳ, ತಾಪಂ ಇಒ ಸುಭಾಷ ಸಂಪಗಾಂವಿ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಸದಸ್ಯ ಬಾಬು ಕುಡಸೋಮನ್ನವರ, ಸಮಾಜದ ಮುಖಂಡರಾದ ಲಕ್ಷಣ ಸೋಮನಟ್ಟಿ, ವಿಠ್ಠಲ ಅಜ್ಜನಕಟ್ಟಿ, ಮಾರುತಿ ಶೆರೆಗಾರ, ರಾಮಪ್ಪ ಚಂದರಗಿ, ನಿಂಗಪ್ಪ ಕುರಿ, ಮಡಿವಾಳಪ್ಪ ಭಂಗಿ, ಸಿದ್ದಪ್ಪ ಗೋವನಕೊಪ್ಪ, ನ್ಯಾಯವಾದಿ ಶಶೀಧರ ಚಿಕ್ಕೊಡಿ, ಜಗದೀಶ ಕೊತ್ತಂಬ್ರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಯಡಳ್ಳಿ, ಕಂದಾಯ ಅಧಿಕಾರಿ ಸುರೇಶ ಮಾಳಗಿ ಇತರರು ಇದ್ದರು.

    ಕೊಳವಿ ವರದಿ: ಸಮೀಪದ ಮಮದಾಪುರ ಕ್ರಾಸ್‌ನಲ್ಲಿ ಕನಕ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು. ಕನಕದಾಸ ಭಾವಚಿತ್ರಕ್ಕೆ ಗೋಕಾಕ ಶಾಸಕರ ಆಪ್ತ ಕಾರ್ಯದರ್ಶಿ ಸುರೇಶ ಸನದಿ ಹಾಗೂ ಕೆಂಪಣ್ಣ ಮೈಲನ್ನವರ ಪೂಜೆ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷ ರಮೇಶ ಗಾಣಿಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts