More

    ಸಮಾಜದಲ್ಲಿ ಸತ್ಯ ಹೇಳುವವರ ಸಂಖ್ಯೆಯೇ ಕಮ್ಮಿ

    ಸೇಡಂ:ದಿನಗಳೆದಂತೆ ಸಮಾಜದಲ್ಲಿ ಸತ್ಯ ಹೇಳುವವರ ಸಂಖ್ಯೆ ಕಮ್ಮಿಯಾಗುತ್ತಿದೆ. ನಿಜ ಹೇಳಿದರೆ ಜನ ನಮ್ಮಿಂದ ದೂರವಾಗುತ್ತಾರೆ ಎಂಬ ಭಯದಲ್ಲಿ ಕೆಲಸ ಮಾಡುವಂಥ ಸ್ಥಿತಿ ಬಂದಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ ಕಳವಳ ವ್ಯಕ್ತಪಡಿಸಿದರು.

    ಕೊತ್ತಲ ಬಸವೇಶ್ವರ ದೇವಾಲಯದ ನಾಗೇಂದ್ರಪ್ಪ ಪಾಟೀಲ್ ಅರೆಬೊಮ್ನಳ್ಳಿ ಕಲ್ಯಾಣ ಮಂಟಪದಲ್ಲಿ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಪತ್ರಕರ್ತ ಹಾಗೂ ಶಿವಸಂಪದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ವೀರಭದ್ರ ಮಾಮನಿ ಹಾಗೂ ಶಿವಯ್ಯ ಮಠಪತಿ ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹಸ್ರಾರು ಜನರ ಅಂತರಾಳದಲ್ಲಿದ್ದಾರೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಮಾತನಾಡಿ, ಪತ್ರಕರ್ತರಾಗುವುದು ಸುಲಭದ ಕೆಲಸವಲ್ಲ, ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವಿಷಯ ಸಂಗ್ರಹಿಸುವ ವೇಳೆ ಸಾಕಷ್ಟು ತೊಂದರೆ, ತಾಪತ್ರಯಗಳನ್ನು ದಾಟಿ ಸಮಾಜಕ್ಕೆ ಉತ್ತಮ ಸುದ್ದಿ ತಲುಪಿಸುವ ಕೆಲಸ ಮಾಡುತ್ತಾರೆ ಎಂದು ಬಣ್ಣಿಸಿದರು.

    ಪ್ರತಿಷ್ಠಾನದ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಪ್ರಶಸ್ತಿ ಪುರಸ್ಕೃತರಾದ ರಾಮಚಂದ್ರರೆಡ್ಡಿ ಪಾಟೀಲ್, ನಾಗರಾಜ ಕಿರಣಗಿ, ಬಸವರಾಜ ದೇಶಮುಖ ಮಾತನಾಡಿದರು.

    ಮೋನಪ್ಪ ಪೋದ್ದಾರ ಪ್ರಾರ್ಥಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ್ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ ನಿರೂಪಣೆ ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ನಾಗಯ್ಯ ಸ್ವಾಮಿ ಬೊಮ್ನಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts