More

    ಸಮಾಜಕಾರ್ಯ ಶಿಬಿರದಲ್ಲಿ ಆರೋಗ್ಯ ತಪಾಸಣೆ


    ಸೋಮವಾರಪೇಟೆ: ಮೈಸೂರು ವಿಶ್ವವಿದ್ಯಾಲಯ, ಹೊಳೆನರಸೀಪುರ ಪಡವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ಅಧ್ಯಯನ ವಿಭಾಗ, ಕೊಡಗು ನಾವು ಪ್ರತಿಷ್ಠಾನ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ತಾಲೂಕಿನ ಪುಷ್ಪಗಿರಿ ಶ್ರೀಶಾಂತಮಲ್ಲಿಕಾರ್ಜುನ ದೇವಾಲಯ ಸಮುದಾಯ ಭವನದಲ್ಲಿ ಆಯೋಜಿಸಿರುವ ಹತ್ತು ದಿನದ ಸಮಾಜಕಾರ್ಯ ಶಿಬಿರದಲ್ಲಿ ಸ್ಥಳೀಯ ಗ್ರಾಮ ನಿವಾಸಿಗಳಿಗೆ ಹಾಗೂ ಶಿಬಿರಾರ್ಥಿಗಳಿಗೆ ಗುರುವಾರ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.


    ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಪರ್ಣಾ, ಶಾಂತಳ್ಳಿ ಆರೋಗ್ಯ ಕೇಂದ್ರದ ಡಾ.ಚಾರುಲತಾ ಅರೋಗ್ಯ ತಪಾಸಣೆ ಮಾಡಿದರು. ವೈದ್ಯರ ಸಲಹೆ ಮೇರೆಗೆ ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಿಬೇಕು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಆರೋಗ್ಯವಂತರಿಂದ ಸುಖಿ ಸಮಾಜವನ್ನು ನಿರ್ಮಾಣವಾಗುತ್ತದೆ ಎಂದು ಡಾ.ಸುಪರ್ಣಾ ಹೇಳಿದರು.

    ಕಾರ್ಯಕ್ರಮದಲ್ಲಿ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾಕ್ಷಿ, ಹೆಗ್ಗಡಮನೆ ಸೇರಿದಂತೆ ಐದು ಗ್ರಾಮಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಉದಯ್‌ಕುಮಾರ್, ಪ್ರತಿಷ್ಠಾನ ಸ್ಥಾಪಕ ಗೌತಮ್ ಕಿರಗಂದೂರು, ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿಚಂಗಪ್ಪ, ಪ್ರಾಧ್ಯಾಪಕರಾದ ಸಂಜೀವ್ ಕುಮಾರ್, ದೀಪು, ರಿಯಾಜ್ ಆಹಮ್ಮದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts