More

    ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ಇರಲಿ

    ಬೆಳಗಾವಿ: ಭಾರತವು ಪ್ರತಿ ವರ್ಷ 50 ಲಕ್ಷ ಇಂಜಿನಿಯರಿಂಗ್ ಪದವೀಧರರನ್ನು ಉತ್ಪಾದಿಸುತ್ತಿದೆ. ಇಂಜಿನಿಯರ್‌ಗಳಾಗಿ ಸ್ಪರ್ಧಾತ್ಮಕ ಕ್ಷೇತ್ರಗಳ ಬಗ್ಗೆ ಯೋಚಿಸಿ ಮತ್ತು ಸಾಮಾಜಿಕ ಸಮಸ್ಯೆ ಪರಿಹರಿಸುವುದಕ್ಕೆ ಆದ್ಯತೆ ನೀಡಿ ಎಂದು ಆಂಧ್ರಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ.ಕೋರಿ ಹೇಳಿದರು.

    ಕರ್ನಾಟಕ ಲಾ ಸೊಸೈಟಿಯ ಗೊಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಜಿಐಟಿ) ಶನಿವಾರ 6ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಮುಂಬರುವ ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಭಾರತವು ಸ್ವಾವಲಂಬಿ ರಾಷ್ಟ್ರವಾಗಲಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಏರೋಸ್ಪೇಸ್ ರೋಬಾಟಿಕ್, ಸೈಬರ್ ಭದ್ರತೆ, ಡೇಟಾ ಸೈನ್ಸ್, ಹಸಿರು ಶಕ್ತಿಯಲ್ಲಿ ಹೆಚ್ಚಿನ ಸಂಶೋಧನೆಯ ಅಗತ್ಯತೆ ಇದೆ. ಪಠ್ಯಕ್ರಮ ಕೇವಲ ಶೇ.25 ಜ್ಞಾನ ನೀಡುತ್ತದೆ. ಜೀವನ ಇನ್ನುಳಿದ ಪಾಠ ಕಲಿಸುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಮೈಗೂಡಿಸಿಕೊಳ್ಳಬೇಕು ಎಂದರು.

    ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ವಿದ್ಯಾಶಂಕರ ಎಸ್. ಮಾತನಾಡಿ, ಈಗಿನ ಹೊಸ ಇಂಜಿನಿಯರಿಂಗ್‌ನಲ್ಲಿ ವಿಟಿಯು ಪಠ್ಯಕ್ರಮದ ಮರುರಚನೆ ಈ ಶೈಕ್ಷಣಿಕ ವರ್ಷದಿಂದ ನಡೆಯಲಿದೆ ಎಂದರು. ಜಿಐಟಿ ಉದ್ಯೋಗಶೀಲ ಪದವೀಧರರನ್ನು ನೀಡುತ್ತಿದೆ. ಜೀವನ ಹೊಸ ಸವಾಲು ಒಡ್ಡುತ್ತದೆ. ಅದನ್ನು ಎದುರಿಸಿ ನಿಲ್ಲಬೇಕು ಎಂದರು.

    ಕೆಎಲ್‌ಎಸ್ ಅಧ್ಯಕ್ಷ ಅನಂತ ಮಂಡಗಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಪ್ರಾಚಾರ್ಯ ಡಾ.ಜಯಂತ್ ಕಿತ್ತೂರು, ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ, ಅಶೋಕ ಐರನ್ ಗ್ರೂಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ್ ಹುಂಬರವಾಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts