More

    ಸಮರ್ಪಕ ವಿದ್ಯುತ್​ ಪೂರೈಕೆ ಮಾಡಲು ಆಗ್ರಹ

    ನಾಗರಮುನ್ನೋಳಿ: ತೋಟಪಟ್ಟಿಗಳಿಗೆ ಸಂಜೆ 6 ರಿಂದ ರಾತ್ರಿ 10ರ ವರೆಗೆ ವಿದ್ಯುತ್​ ಪೂರೈಕೆ ಮಾಡುವಂತೆ ಆಗ್ರಹಿಸಿ ನೂರಾರು ರೈತರು ಮಂಗಳವಾರ ಇಲ್ಲಿನ 110 ಕೆವಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಕೇಂದ್ರದ ಎದುರು ಅಡುಗೆ ಮಾಡಿ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

    ವಾರದಿಂದ ತೋಟದ ಪಟ್ಟಿಗಳಿಗೆ ಸರಿಯಾಗಿ ವಿದ್ಯುತ್​ ಪೂರೈಕೆಯಾಗುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಮುಂದೆ ಈ ರೀತಿಯಾಗದಂತೆ ಕ್ರಮ ವಹಿಸಿ. ಸರಿಯಾಗಿ ವಿದ್ಯುತ್​ ಪೂರೈಕೆ ಮಾಡುವವರೆಗೆ ಕೇಂದ್ರದಿಂದ ತೆರಳುವುದಿಲ್ಲ ಎಂದು ಹಠ ಹಿಡಿದರು.

    ಸರಿಯಾಗಿ ವಿದ್ಯುತ್​ ಪೂರೈಕೆ ಮಾಡದಿದ್ದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮನೆಯಲ್ಲಿ ಸಂಜೆ ಸಮಯದಲ್ಲಿ ತೊಂದರೆಯಾಗುತ್ತದೆ. ಹಾಗೂ ಬೆಳೆಗಳಿಗೆ ನೀರುಣಿಸಲು ಪಂಪ್​ಸೆಟ್​ ಕೂಡ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದರು.

    ಹೆಸ್ಕಾಂ ಎಂ.ಡಿ.ಭಾರತಿ ಅವರಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿದಾಗ, ಸಂಜೆ ಸಮಯದಲ್ಲಿ ವಿದ್ಯುತ್​ ನೀಡಲು ನಮಗೆ ತೊಂದರೆ ಇಲ್ಲ. ಆದರೆ, ರೈತರು ರಾತ್ರಿ ಸಮಯದಲ್ಲಿ ಪಂಪ್​ಸೆಟ್​ ಪ್ರಾರಂಭಿಸುತ್ತಾರೆ. ಇದರಿಂದ ವಿದ್ಯುತ್​ ಕೇಂದ್ರದಲ್ಲಿ ಒತ್ತಡ ಸೃಷ್ಟಿಯಾಗುತ್ತಿದೆ.

    ಕಾರಣ, ಮುಂದೆ ಕೂಡ ಸಂಜೆ ಸಮಯದಲ್ಲಿ ವಿದ್ಯುತ್​ ಪೂರೈಕೆ ಮಾಡುತ್ತೇವೆ. ಆದರೆ, ಯಾರೂ ಪಂಪ್​ಸೆಟ್​ ಚಾಲನೆ ಮಾಡಬಾರದು ಎಂದರು. ರೈತರಾದ ಲಕ್ಷ$್ಮಣ ಈಟಿ, ಮಲ್ಲಪ್ಪ ಟೋನಪೆ, ಮಸವರಾಜ ಮನಗೂಳಿ, ಸರದಾರ ಮುಲ್ತಾನಿ, ಮಲ್ಲು ಈಟಿ, ಮಹಾಂತೇಶ ಈಟಿ, ಮಲ್ಲಪ್ಪ ವಗರ್​, ಹನುಮಂತ ಈಟಿ,ಪ್ರವಿಣ ಮನಗೂಳಿ, ಮನೋಜ ಮನಗೂಳಿ, ಸಚೀನ ಟೋಣಪೆ, ಪುಂಡಲಿಕ್​ ಮೋಳಗಿ, ರಾಯಪ್ಪ ಕಟ್ಟಕ್ಕಾರ, ಯಲ್ಲಪ್ಪ ಕಟ್ಟಿಕ್ಕಾರ, ಯಲ್ಲಪ್ಪ ನಾಗರಾಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts