More

    ಸಮನ್ವಯತೆಯಿಂದ ನಿಗದಿತ ಗುರಿ ಸಾಧಿಸಿ

    ಧಾರವಾಡ: ಜಿಲ್ಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪುರಸ್ಕೃತ ಕಾಮಗಾರಿ, ಯೋಜನೆಗಳು ಅನುಷ್ಠಾನದಲ್ಲಿದ್ದು, ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ನಡೆಸಿ ನಿಗದಿತ ಪೂರ್ಣ ಗುರಿ ಸಾಧಿಸಬೇಕು. ಕಾಮಗಾರಿ ಮತ್ತು ಯೋಜನೆಗಳ ಪ್ರಗತಿಯನ್ನು ನಿರಂತರವಾಗಿ ನಿಗಾವಹಿಸಲು ಹಾಗೂ ಇಲಾಖೆಗಳಲ್ಲಿ ಸಮನ್ವಯ ಸಾಧಿಸಲು ಪ್ರತಿ ತಿಂಗಳ 4ನೇ ಸೋಮವಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಲೊಕೋಪಯೋಗಿ, ಜಲಮಂಡಳಿ, ರೈಲ್ವೆ, ಸ್ಮಾರ್ಟ್ ಸಿಟಿ, ಬಿಆರ್​ಟಿಎಸ್, ಪಾಲಿಕೆ ಸೇರಿ ವಿವಿಧ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ರಸ್ತೆ, ಕುಡಿಯುವ ನೀರು, ರಾಷ್ಟ್ರೀಯ ಹೆದ್ದಾರಿ, ಸೇತುವೆ ನಿರ್ವಣ, ಉನ್ನತೀಕರಣ ಕಾಮಗಾರಿಗಳು ನಡೆಯುತ್ತಿವೆ. ಅಧಿಕಾರಿಗಳು ಯೋಜನಾ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಸ್ಥಳೀಯವಾಗಿ ಅನುಷ್ಠಾನ ಹಂತದಲ್ಲಿ ಹಾಗೂ ತಾಂತ್ರಿಕ ಸೇರಿ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂರ್ಪಸಿ. ಅಗತ್ಯವಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದರೆ ಖುದ್ದಾಗಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

    ಹೆಸ್ಕಾಂ ಹಾಗೂ ಜಲಮಂಡಳಿ, ಮಹಾನಗರ ಪಾಲಿಕೆಗಳ ಅನುಮತಿ ಇಲ್ಲದೆ ಅನಧಿಕೃತವಾಗಿ ವಸತಿ (ಲೇಔಟ್)ಬಡಾವಣೆ ನಿರ್ವಿುಸುವವರಿಗೆ ಮೂಲಸೌಕರ್ಯ ನೀಡಬಾರದು. ಅನುಮತಿ ಪಡೆಯದೆ ನಿಯಮ ಬಾಹಿರವಾಗಿ ನಿರ್ವಿುಸಿರುವ ಲೇಔಟ್​ಗಳಿಗೆ ನೋಟಿಸ್ ಜಾರಿ ಮಾಡಿ, ಅಧಿಕೃತ ಅನುಮತಿ ಪಡೆಯುವವರೆಗೆ ಮೂಲ ಸೌಕರ್ಯ ತಡೆಹಿಡಿಯುವಂತೆ ಸೂಚಿಸಿದರು.

    ಅವಳಿನಗರದ ಅನೇಕ ರಸ್ತೆಗಳನ್ನು ಒತ್ತುವರಿ ಮಾಡಲಾಗಿದೆ. ಪುಟಪಾತ್​ಗಳ ಮೇಲೆ ಅಂಗಡಿ ನಿರ್ವಿುಸಲಾಗಿದೆ. ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮಹಾನಗರ ಪಾಲಿಕೆ ಈಗಾಗಲೇ ಗುರುತಿಸಿರುವ ಒತ್ತುವರಿ ಹಾಗೂ ಪುಟ್​ಪಾತ್ ಮೇಲಿನ ಅಂಗಡಿಗಳ ತೆರವು ಮಾಡಿ, ಸುಗಮ ಸಂಚಾರಕ್ಕೆ ಅನುವು ಕಲ್ಪಿಸಬೇಕು. ಅನಗತ್ಯ ಜನದಟ್ಟಣೆ, ವಾಹನದಟ್ಟಣೆ ತಡೆಯಬೇಕು ಎಂದರು.

    ಉಪ ಪೊಲೀಸ್ ಆಯುಕ್ತ ರಾಮರಾಜನ್ ಕೆ. ಮಾತನಾಡಿ, ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ರಸ್ತೆ, ಜಾಗ ಅತಿಕ್ರಮಣ, ಒತ್ತುವರಿ ತೆರವುಗೊಳಿಸಲು ಇಲಾಖೆ ನೆರವು ಬಯಸಿದರೆ ಅಗತ್ಯ ಅಧಿಕಾರಿ, ಸಿಬ್ಬಂದಿ ನೀಡಲಾಗುವುದು ಎಂದರು.

    ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ, ಬಿಆರ್​ಟಿಎಸ್ ಯೋಜನೆಯ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ, ಹುಡಾ ಆಯುಕ್ತ ವಿನಾಯಕ ಪಾಲನಕರ, ಲೊಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎಸ್.ಬಿ.ಚೌಡಣ್ಣವರ, ಪ್ರವಾಸೋದ್ಯಮ ಇಲಾಖೆ, ಹೆಸ್ಕಾಂ, ಕೆಐಡಿಬಿ, ಜಲಮಂಡಳಿ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts