More

    ಸಮತಟ್ಟಾದ ಗಲೀಜು ನೀರಿನ ಹೊಂಡದ ಸ್ಥಳ

    ಮುಂಡರಗಿ: ಪಟ್ಟಣದ ಕಡ್ಲೇಪೇಟೆ ಓಣಿಯಲ್ಲಿ ಗಲೀಜು ನೀರು ಸಂಗ್ರಹದಿಂದ ಹೊಂಡವಾಗಿದ್ದ ಸ್ಥಳವನ್ನು ಪುರಸಭೆಯಿಂದ 40 ಟ್ರ್ಯಾಕ್ಟರ್ ಗರಸು ಹಾಕಿ ಜೆಸಿಬಿಯಿಂದ ಮಂಗಳವಾರ ಸಮತಟ್ಟುಗೊಳಿಸಲಾಗಿದೆ.

    ಎರಡ್ಮೂರು ವರ್ಷಗಳಿಂದ ಗಲೀಜು ನೀರು ಒಂದೆಡೆ ಸಂಗ್ರಹವಾಗಿ ಹೊಂಡದಂತಾಗಿತ್ತು. ಇದರಿಂದ ದುರ್ನಾತ ಬೀರಿ ಸೊಳ್ಳೆ, ತಿಗಣಿ ಕಾಟ ಹೆಚ್ಚಾಗಿ ನಿವಾಸಿಗಳು ಪ್ರತಿ ದಿನ ಸಮಸ್ಯೆ ಎದುರಿಸುತ್ತಿದ್ದರು. ಸಂಚಾರಕ್ಕೂ ತೊಂದರೆಯಾಗಿತ್ತು. ಈ ಕುರಿತು ವಿಜಯವಾಣಿ ಸೆ. 28ರಂದು ‘ಕೊಳಚೆ ನೀರಿನಿಂದ ರೋಗ ಭೀತಿ’ ಶೀರ್ಷಿಕೆಯಡಿ ವಿಸõತ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು, ಹೊಂಡ ನಿರ್ವಣವಾಗಿದ್ದ ಜಾಗವನ್ನು ಸಮತಟ್ಟುಗೊಳಿಸಿ ನೀರು ಹರಿಯುವಂತೆ ಮಾಡಿದ್ದಾರೆ.

    ಕಡ್ಲೇಪೇಟೆ ಓಣಿಯಲ್ಲಿ ಗಲೀಜು ನೀರು ಸಂಗ್ರಹಗೊಂಡ ಸ್ಥಳವನ್ನು ಪುರಸಭೆ ಸಿಬ್ಬಂದಿಯಿಂದ ಗರಸು ಹಾಕಿಸಲಾಗಿದೆ. ಜೆಸಿಬಿಯಿಂದ ಸಮತಟ್ಟುಗೊಳಿಸಿ ನೀರು ನಿಲ್ಲದಂತೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಉತ್ತಮ ರಸ್ತೆ, ಚರಂಡಿ ನಿರ್ವಿುಲಾಗುವುದು.

    | ರಮೇಶ ಹೊಸಮನಿ ಮುಂಡರಗಿ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts