More

    ಸಬಲೀಕರಣಕ್ಕೆ ಚಳುವಳಿಗಳು ಅನಿವಾರ್ಯ

    ಕಲಬುರಗಿ: ನಮ್ಮ ಜೀವನೋಪಾಯಕ್ಕೆ ಬೇಕಾದ ಅಗತ್ಯ ಸಬಲಿಕರಣಕ್ಕೆ ಚಳುವಳಿಗಳು ನಡೆಸಬೇಕಾದ ಅನಿವಾರ್ಯತೆಯಿದೆ. ಸಾಹಿತ್ಯವನ್ನು ಪ್ರವೇಶಿಸದ ಅಲಕ್ಷಿತ ಸಮುದಾಯಗಳ ಸಂವಹನ ನಡೆಯಬೇಕಿದೆ. ಸಾಹಿತ್ಯವನ್ನು ಪುನರಾವಲೋಕನ ಮಾಡಬೇಕಿದೆ ಎಂದು ಪ್ರೊ.ಚಿತ್ತಯ್ಯ ಪೂಜಾರ ಹೇಳಿದರು.
    ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಿAದ ಶನಿವಾರ ಏರ್ಪಡಿಸಿದ್ದ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆಯಲ್ಲಿ `ಅಲಕ್ಷಿತ ಸಮುದಾಯಗಳ ಸೃಜಸಿದ ಸಾಹಿತ್ಯ’ ಕುರಿತು ಮಾತನಾಡಿ, ಕೊರೊನಾ ಕಾಲಘಟ್ಟದಿಂದ ಕೆಟ್ಟು ಪಟ್ಟಣ ಸೇರು ಎಂಬುದು ಬಿಟ್ಟು ಊರು ಸೇರಬೇಕಾಗಿದೆ ಎಂದು ಹೇಳಿದರು.
    ಗ್ರಾಮೀಣ ಜಗತ್ತು ಜ್ಞಾನದ ಕಣಜವಾಗಿದೆ. ದೇಸಿಯ ಶ್ರಮ ಮೂಲದಿಂದ ಜನಿಸಿದ ಅನುಭವ ಜನ್ಯ ಸಾಹಿತ್ಯ ಅವಲೋಕನ ನಡೆಯಬೇಕಿದೆ. ಜಾಗತಿಕರಣದ ಕರಿನೆರಳಿನಲ್ಲಿ ನರುಳುತ್ತಿರುವ ಜಗತ್ತು ಬದಲಾವಣೆಗೆ ಒಡ್ಡಿಕೊಳ್ಳಬೇಕು. ಹಲವು ಸಮುದಾಯಗಳು ಅಲೆಮಾರಿಯಾಗಿ ನೆಲೆ ಇಲ್ಲದೆ ತಿರುಗಾಡುತ್ತಿದೆ. ಅವುಗಳ ಸಂಕಟ, ಸಮಸ್ಯೆ, ಸಂಸ್ಕೃತಿಗಳನ್ನು ದಾಖಲಿಸಬೇಕಿದೆ ಎಂದರು.
    ಅಲೆಮಾರಿಗಳ ಕಷ್ಟ-ಕಾರ್ಪಣ್ಯ-ನೋವು ನಲಿವಿನ ಕುರಿತು ಗಮನ ತತ್ವಪದ, ದಾಸರು, ಸಂತರು, ಕೀರ್ತನೆಕಾರರು, ಸೂಫಿಗಳು, ಅವಧೂತರು, ಸುಡಗಾಡÀÄ ಸಿದ್ದರು ಮುಖ್ಯವಾಹಿನಿಗೆ ತಂದು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ನಿರ್ಲಕ್ಷಿತ ಕುಲಕಸುಬು, ವೃತ್ತಿ, ಶಿಲ್ಪಿ ನೀರಘಂಟಿ, ಮಡಿವಾಳ, ಕಂಬಾರ, ಕುಂಬಾರ ವಿಷಯಗಳನ್ನು ಮುನ್ನೆಲೆಗೆ ತರಬೇಕು ಎಂದರು.
    ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ತತ್ವಪದಕಾರರು, ಸ್ವರವಚನ, ಕೀತರ್ನಕಾರರು ಮೌಲಿಕ ಸಾಹಿತ್ಯ ರಚಿಸಿದರು. ನಿರ್ಲಕ್ಷÈದಿಂದ ದೂರ ಉಳಿದ ವಿಚಾರ ಹಾಗೂ ಚಿಂತನೆಗಳನ್ನು ಸಂಶೋಧಕರು ಪ್ರಚುರಪಡಿಸಬೇಕು. ಅಲಕ್ಷಿತ ಸಮುದಾಯದ ಕಲೆ, ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಸಾಮಾಜಿಕತೆ ಅನಾವರಣ ಮಾಡಬೇಕಿದೆ ಎಂದು ಹೇಳಿದರು.
    ಡಾ.ನಾಗಪ್ಪ ಗೋಗಿ ಇತರರಿದ್ದರು. ಡಾ.ಸಂತೋಷಕುಮಾರ ಎಸ್. ಕಂಬಾರ ಸ್ವಾಗತಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿ ಪವಿತ್ರ ವಂದಿಸಿದರು. ಅಣವೀರ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts