More

    ಸನಾತನ ಸಂಸ್ಕೃತಿ ಉಳಿಸಿ-ಬೆಳೆಸಿ

    ನರೇಗಲ್ಲ: ಪರಕೀಯರು ನಮ್ಮ ಮೇಲೆ ಸಾಕಷ್ಟು ದಾಳಿ-ದಬ್ಬಾಳಿಕೆ ಮಾಡಿದರೂ ನಾಡಿನ ಮಠ ಮಾನ್ಯಗಳು ದೇಶದ ಸಂಸ್ಕಾರ-ಸಂಸ್ಕೃತಿಯನ್ನು ಉಳಿಸಿ-ಬೆಳೆಸಿವೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಸಮೀಪದ ಹಾಲಕೆರೆ ಗ್ರಾಮದಲ್ಲಿ ಸೋಮವಾರ ಲಿಂ. ಗುರು ಅನ್ನದಾನ ಸ್ವಾಮೀಜಿಗಳ 45ನೇ ಪುಣ್ಯಾರಾಧನೆಯ ನಿಮಿತ್ತ ಹಮ್ಮಿಕೊಂಡಿದ್ದ ಮಹಿಳಾ ಸಂಘಟನೆಗಳ ಸಮಾವೇಶ, ಮಹಿಳಾಪರ ಚಿಂತನಗೋಷ್ಠಿ ಹಾಗೂ ಅನ್ನ-ಅಕ್ಷರ ದಾಸೋಹ ಪಥ ಸಂಪುಟ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ‘ಆಧುನಿಕತೆಯ ಭರಾಟೆಯಲ್ಲಿ ಮಹಿಳೆಯರು ನಮ್ಮ ಸನಾತನ ಸಂಸ್ಕಾರ ಸಂಸ್ಕೃತಿಯನ್ನು ಮರೆಯಬಾರದು. ನಾವು ಎಷ್ಟೇ ವಿದ್ಯಾವಂತರಾಗಿ, ಆರ್ಥಿಕವಾಗಿ ಸಬಲಾರಾದರೂ ನಮ್ಮತನ ಮರೆಯಬಾರದು. ಹಾಲಕೆರೆ ಶ್ರೀಮಠವು ವಿಶೇಷವಾಗಿ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಶ್ರಮಿಸುತ್ತಿದೆ. ಮಹಿಳೆಯರಿಗಾಗಿಯೇ ಬೆಳ್ಳಿ ರಥ ನಿರ್ವಣ, ಮಹಿಳಾ ಸಮಾವೇಶ, ಚಿಂತನಾಗೋಷ್ಠಿ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ’ ಎಂದರು.

    ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿದರು. ಕಲಾವಿದೆ ಇಂದುಮತಿ ಸಾಲಿಮಠ ಅವರ ಭಾಷಣ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. ‘ಅನ್ನ-ಅಕ್ಷರ ದಾಸೋಹ ಪಥ’ ಸಂಪುಟವನ್ನು ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಬಿಡುಗಡೆಗೊಳಿಸಿ, ಆಶೀರ್ವಚನ ನೀಡಿದರು. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅದ್ಯಕ್ಷತೆ ವಹಿಸಿದ್ದರು. ಮುಪ್ಪಿನ ಬಸವಲಿಂಗ ಸ್ವಾಮೀಜಿ, ಖೇಳಗಿ ಶೀವಲಿಂಗೇಶ್ವರಮಠದ ಶಿವಲಿಂಗ ಸ್ವಾಮೀಜಿ, ದರೂರ ಸಂಗನಬಸವೇಶ್ವರ ಮಠದ ಕೊಟ್ಟೂರೇಶ್ವರ ಸ್ವಾಮೀಜಿ, ಗುಳೆದಗುಡ್ಡದ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸದಾಶಿವ ದೇವರು, ಕುರಗೋಡ ನಾಗಲಾಪೂರ ವಿರಕ್ತಮಠದ ಪರ್ವತ ದೇವರು. ಸೋಮಸಮುದ್ರ ವಿರಕ್ತಮಠದ ಸಿದ್ಧಲಿಂಗ ದೇವರು, ಶ್ರೀಧರಗಡ್ಡೆ ವಿರಕ್ತಮಠದ ಮರಿಕೊಟ್ಟೂರ ದೇವರು, ಸಿರಿಗೆರೆಯ ಸಿದ್ಧೇಶ್ವರ ದೇವರು ಸಮ್ಮುಖ ವಹಿಸಿದ್ದರು. ಅನ್ನಪೂರ್ಣ ಪಾಟೀಲ, ಗೌರಮ್ಮ ಪಾಟೀಲ, ಮಹಾದೇವಿ ಮಾಳಗೌಡ್ರ, ಅನ್ನಪೂರ್ಣ ಚೌಕಿಮಠ ಬಸಲಿಂಗಪ್ಪ ಅಕ್ಕಿ, ಜ್ಯೋತಿ ಶೆಟ್ಟರ, ಮಮತಾ ರೇವಡಿ ಇದ್ದರು. ಉಪನ್ಯಾಸಕಿ ರತ್ನಾ ಪಾಟೀಲ, ಪೂರ್ಣಿಮಾ ಅಂಗಡಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts