More

    ಸನಾತನ ಧರ್ಮದ ಉಳಿವಿಗೆ ಶ್ರಮಿಸಿ

    ಶಿಗ್ಗಾಂವಿ: ನಮ್ಮ ಸನಾತನ ಧರ್ಮಕ್ಕೆ ಋಷಿ ಪರಂಪರೆಯಿಂದ ಬಹು ದೊಡ್ಡ ಕಾಣಿಕೆ ಸಿಕ್ಕಿದೆ ಎಂದು ಬೆಂಗಳೂರು ದಕ್ಷಿಣದ ಶ್ರೀ ಆದಿಶಂಕರಾಚಾರ್ಯ ಅಧ್ವೈತ ಪೀಠದ ಜಗದ್ಗುರು ಶಿವಾನಂದ ಭಾರತೀ ಸ್ವಾಮಿಗಳು ಹೇಳಿದರು.

    ಪಟ್ಟಣದ ರಾಷ್ಟ್ರೀಯ ಹೆದ್ದಾರಿ- 4ರ ದೇಸಾಯಿ ಫಾಮರ್್​ಹೌಸ್​ನಲ್ಲಿ ಸ್ವಯಂಭೂ ಸೀತಾರಾಮ ಸಹಿತ ಹನುಮಂತ (ಆಂಜನೇಯ) ಚಾರಿಟಬಲ್ ಟ್ರಸ್ಟ್ ವತಿಯಿಂದ ಅಧಿಕ ಮಾಸದ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಗೋ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನಶಿಸಿ ಕ್ಷೀಣವಾಗುತ್ತಿದ್ದ ನಮ್ಮ ಸನಾತನ ಧರ್ಮ (ಹಿಂದು ಧರ್ಮ)ದ ಉದ್ಧಾರಕ್ಕಾಗಿ ಶ್ರೀ ಆದಿಶಂಕರಾಚಾರ್ಯರು ಅಖಂಡ ಭಾರತವನ್ನು ಮೂರು ಬಾರಿ ಕಾಲ್ನಡಿಗೆ ಮೂಲಕ ಸಂಚರಿಸಿದರು. ಅದ್ವೈತ ಪ್ರಚಾರ ಹಾಗೂ ವೇದ, ವೇದಾಂತ ಪ್ರಚಾರದ ಮೂಲಕ ಹಿಂದು ಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಅಂತಹ ಆದಿಶಂಕರರ ಪರಂಪರೆಯಲ್ಲಿ ಧರ್ಮ ಪಾಲನೆಗೆ ನಾವು ಕಂಕಣಕಟ್ಟಿ ನಿಂತಿದ್ದೇವೆ. ನಮ್ಮ ಉದ್ದೇಶ ಅಖಂಡ ವಿಶ್ವಕ್ಕೆ ಅದ್ವೈತವನ್ನು ಸಾರುವುದಾಗಿದೆ ಎಂದರು.

    ಇದಕ್ಕೂ ಮೊದಲು ಮಾತನಾಡಿದ ವೇದಮೂರ್ತಿ ವಿನಾಯಕ ಭಟ್ ಹಂಪಿಹೊಳಿ, ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣ ಇರುವುದಿಲ್ಲ. ಆದ್ದರಿಂದ ಇದು ಸರಾಸರಿ ಮೂರು ವರ್ಷಕ್ಕೊಮ್ಮೆ 33 ದಿವಸ ಬರುತ್ತದೆ. ಇಂತಹ ಪುಣ್ಯಕಾಲದಲ್ಲಿ ನಮ್ಮ ಧಾರ್ವಿುಕ ಭಾವನೆಗಳು ಜಾಗೃತಿಯಾಗಿದ್ದರೆ ಸಕಲ ದೋಷಗಳು ನಿವಾರಣೆಯಾಗುತ್ತವೆ ಎಂದರು.

    ಧಾರವಾಡ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಮುಕುಂದ ಭಿಕಾಜಿ ನಾತು, ದತ್ತ ಪಾದಯಾತ್ರೆ ಸಮಿತಿಯ ಆನಂದ ಕುಲಕರ್ಣಿ, ನರ್ಮದಾ ಪರಿಕ್ರಮಿ ಕೃಷ್ಣ ಸಂಪಗಾಂವಕರ ಮಾತನಾಡಿದರು. ಮನೋಜ ದೇಸಾಯಿ ಕುಟುಂಬಸ್ಥರು ಮತ್ತು ಶ್ರೀಗಳು ಸಂಪ್ರದಾಯದಂತೆ 33 ಗೋವುಗಳಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಮನೋಜ ದೇಸಾಯಿ, ಪ್ರಕಾಶ ದೇಸಾಯಿ, ಆನಂದ ಚಾಕಲಬ್ಬಿ, ಸಂದೀಪ ಕೊಪ್ಪದ, ಡಿ.ಕೆ. ಕುಲಕರ್ಣಿ, ಶಂಕರ ಪಾಟೀಲ, ನಾರಾಯಣ ಪಾಂಡುರಂಗ, ಸ್ಪಂದನಾ ಜೋಷಿ, ಲಕ್ಷ್ಮಣ ಕುಲಕರ್ಣಿ, ಡಿ.ಎಸ್. ಭಟ್, ಗುರುಪ್ರಕಾಶ ಕುಲಕರ್ಣಿ, ಮಂಜುಳಾ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts