More

    ಸದೃಢ ನ್ಯಾಯಾಂಗ ಕಟ್ಟುವ ಕೆಲಸವಾಗಲಿ

    ಗದಗ: ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ಹೊಂದಿದ ನಮ್ಮ ದೇಶದಲ್ಲಿ ಸದೃಢ ನ್ಯಾಯಾಂಗ ಕಟ್ಟುವಂತಹ ಕೆಲಸವಾಗಬೇಕಾಗಿದೆ. ಜನರು ನಂಬಿಕೆ ಇಟ್ಟು ನ್ಯಾಯಾಲಯಕ್ಕೆ ಬರುತ್ತಾರೆ. ನ್ಯಾಯಾಂಗವು ಸಮಾಜದಲ್ಲಿ ನೊಂದವರ ಧ್ವನಿಯಾಗಿ ನ್ಯಾಯ ವಿತರಣೆಗೆ ಮುಂದಾಗಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಗದಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಪಿ. ಸಂದೇಶ ಹೇಳಿದರು.

    ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಗಳ ಸಂಘದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾನೂನು ಕಲಿಕೆ ಮತ್ತು ಸಂವಾದ 2019ರ 2ನೇ ಆವೃತ್ತಿ ಪುಸ್ತಕದ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

    ಕಲಿಕೆ ನಿರಂತರವಾದ ಪ್ರಕ್ರಿಯೆಯಾಗಿದೆ. ಬದುಕು ಸಾರ್ಥಕತೆ ಕಂಡುಕೊಳ್ಳಬೇಕಾದರೆ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆ ಸಲ್ಲಿಸಬೇಕು ಎಂದರು.

    ವಕೀಲರು, ನ್ಯಾಯಾಧೀಶರು ಸಮಾಜದ ಭದ್ರತೆಗೆ ಅನುಸಾರವಾಗಿ ಕೆಲಸ ಮಾಡಬೇಕು. ನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಬೇಕು. ನ್ಯಾಯ ವಿತರಣೆ ಕೆಲಸ ಪವಿತ್ರವಾದ ಕೆಲಸ. ಯಾವುದೇ ಪ್ರಕರಣಗಳು ಬಂದಾಗ ಆಳವಾದ ಅಧ್ಯಯನ ಮಾಡಿ ಪ್ರಥಮ ಹಂತದಲ್ಲಿಯೇ ಸರಿಯಾಗಿ ನ್ಯಾಯ ವಿತರಣೆ ಮಾಡಲು ನ್ಯಾಯಾಧೀಶರು, ವಕೀಲರು ಶ್ರಮಿಸಬೇಕು ಎಂದು ಹೇಳಿದರು.

    ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮತ್ತು ಸತ್ರ ನ್ಯಾಯಾೕಶರಾದ ಜಿ.ಎಸ್. ಸಂಗ್ರೇಶಿ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರೂಪಾ ನಾಯ್ಕ, 1ನೇ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಚೆಲುವಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀನಿವಾಸ , ಹಿರಿಯ ದಿವಾಣಿ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ, ಪ್ರಧಾನ ದಿವಾಣಿ ಹಾಗೂ ಜೆಎಂಎಫ್​ಸಿ ನ್ಯಾಯಾಧೀಶ ಅಲಪ್ಪ ಬಡಿಗೇರ, 1ನೇ ಅಧಿಕ ದಿವಾಣಿ ಹಾಗೂ ಜೆಎಂಎಫ್​ಸಿ ನ್ಯಾಯಾಧೀಶ ಮಹಾದೇವಪ್ಪ ಎಚ್, 2ನೇ ಅಧಿಕ ದಿವಾಣಿ ಹಾಗೂ ಜೆ ಎಂ ಎಫ್ ಸಿ ನ್ಯಾಯಾಧೀಶ ಶ್ರೀಕಾಂತ ರವೀಂದ್ರ, 3ನೇ ಅಧಿಕ ದಿವಾಣಿ ಹಾಗೂ ಜೆಎಂಎಫ್​ಸಿ ನ್ಯಾಯಾಧೀಶ ಸಲ್ಮಾ ಎ.ಎಸ್., 4ನೇ ಅಧಿಕ ದಿವಾಣಿ ಹಾಗೂ ಜೆಎಂಎಫ್​ಸಿ ನ್ಯಾಯಾಧೀಶ ನಿಖಿತಾ ಎಸ್. ಅಕ್ಕಿ ಸೇರಿ ವಕೀಲರು, ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

    ಎಂ.ಎ. ಬಿಜಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಚ್.ಬಡಿಗೇರ, ಭಾರತಿ ಶೆಲವಡಿ ಪ್ರಾರ್ಥಿಸಿದರು. ವೈ.ಡಿ. ತಳವಾರ ಸ್ವಾಗತಿಸಿದರು. ಪಿ.ಎಚ್.ಮಾನೆ ಮತ್ತು ಡಿ.ಎಂ. ನದಾಫ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts