More

    ಸದುಪಯೋಗವಾಗಲಿ ನರೇಗಾ ಕೂಲಿ

    ನರಗುಂದ: ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರಿಗೆ ಪುರುಷರ ಸರಿಸಮಾನವಾಗಿ ಕೂಲಿಗೆ ವೇತನ ನೀಡಲಾಗುತ್ತಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾದಲ್ಲಿ ಕೂಲಿ ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ತಿಳಿಸಿದರು.

    ತಾಲೂಕಿನ ಕೊಣ್ಣೂರು ಗ್ರಾಪಂ ವ್ಯಾಪ್ತಿಯ ಕಲ್ಮಠ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮೀಣ ಪ್ರದೇಶಗಳ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರ ಜತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮಹಿಳೆಯರು ನರೇಗಾ ಹೊರತುಪಡಿಸಿ ಇನ್ನಿತರ ಕೆಲಸಕ್ಕೆ ತೆರಳಿದರೆ ನರೇಗಾ ಕೂಲಿ ಮೊತ್ತಕ್ಕಿಂತ ಕಡಿಮೆ ಇದೆ. ಆದರೆ, ನರೇಗಾ ಯೋಜನೆಯಲ್ಲಿ ದಿನಕ್ಕೆ 309 ರೂಪಾಯಿ ಕೂಲಿ ಮೊತ್ತ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ವರ್ಷದಲ್ಲಿ 100 ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದರೆ 30,900 ರೂಪಾಯಿ ಕೂಲಿ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗುತ್ತದೆ ಎಂದರು.

    ಕೊಣ್ಣೂರು ಗ್ರಾಪಂ ಪಿಡಿಒ ಮಂಜುನಾಥ ಗಣಿ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಮಹಿಳೆಯರಿಗೆ ಅವಶ್ಯಕ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ. ನರೇಗಾದಡಿ ಮಹಿಳೆಯರಿಗೆ ಅನುಕೂಲವಾಗಲೆಂದು ಸಂಜೀವಿನಿ ಮಹಿಳಾ ವರ್ಕ್ ಶೆಡ್ ನಿರ್ಮಾಣ ಮಾಡಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ನರೇಗಾ ಯೋಜನೆಯ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ, ಕೊಣ್ಣೂರ ಗ್ರಾ.ಪಂ. ಗ್ರೇಡ್-1 ಕಾರ್ಯದರ್ಶಿ ಎಂ.ಎ. ವಾಲಿ, ತಾಂತ್ರಿಕ ಸಹಾಯಕ ಸುನಿಲ, ಬಿಎಫ್​ಟಿ ಪೂರ್ಣಾನಂದ ಸುಂಕದ, ಗ್ರಾಮ ಕಾಯಕ ಮಿತ್ರ ಅನಸೂಯಾ ಹಾಗೂ ಕೊಣ್ಣೂರಿನ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts