More

    ಸದಾಶಿವ ವರದಿ ಜಾರಿಗೆ ಆಗ್ರಹ

    ಚಿತ್ರದುರ್ಗ: ನಿ.ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಬೆಳಗಾವಿ ಅಧಿವೇಶನದೊಳಗೆ ಅಂಗೀಕರಿಸಿ, ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮಾದಿಗ ಮಹಾಸಭಾ ಅಧ್ಯಕ್ಷ ಹನುಮಂತಪ್ಪ ದುರ್ಗ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಸೌಲಭ್ಯ ಪಡೆದು ಚುನಾಯಿತರಾಗಿ ಆಯ್ಕೆಯಾದವರೂ ಈ ಕುರಿತು ಧ್ವನಿ ಎತ್ತುತ್ತಿಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಹೊಂದಾಣಿಕೆ ರಾಜಕಾರಣ ಬಿಡಬೇಕು. ಕಳೆದ 3 ದಶಕಗಳ ಹೋರಾಟಕ್ಕೆ ಸ್ಪಂದಿಸಬೇಕು. ಈ ಅಧಿವೇಶನದೊಳಗೆ ಜಾರಿಯಾಗದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸದಾಶಿವ ವರದಿ ಅವೈಜ್ಞಾನಿಕ, ಮರಣ ಶಾಸನವೆಂದು ಪ್ರತಿ ಬಾರಿ ವಿಧಾನಸಭಾ ಅಧಿವೇಶನ ನಡೆಯುವ ವೇಳೆ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಹೇಳಿಕೆ ನೀಡಿ, ಪರಿಶಿಷ್ಟರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದನ್ನು ಹಿಂಪಡೆಯಬೇಕು. ದಲಿತ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದ್ದು, ಸಂವಿಧಾನದ ಆಶಯದಡಿ ಅರ್ಹರೆಲ್ಲರಿಗೂ ಸೌಲಭ್ಯ ಸಿಗಬೇಕಾದರೆ ಈ ವರದಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

    ಶೋಷಿತ ಸಮಾಜದ ಅಧ್ಯಕ್ಷ ಬಿ.ರಾಜಣ್ಣ ಮಾತನಾಡಿ, ಮೀಸಲಾತಿ ಸೌಲಭ್ಯ ಪಡೆದು ಗೆದ್ದವರು ಸದಾಶಿವ ಆಯೋಗದ ವರದಿಯನ್ನು ಏಕೆ ವಿರೋಧಿಸುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೇಳುತ್ತಿದ್ದೇವೆ ಹೊರತು ಕಸಿದುಕೊಳ್ಳಲು ಯತ್ನಿಸುತ್ತಿಲ್ಲ. ಮುಂಜಾನೆ ಮೈಕೊರೆಯುವ ಚಳಿ ಲೆಕ್ಕಿಸದೆ ಗ್ರಾಮ, ಪಟ್ಟಣ, ನಗರಗಳ ಸ್ವಚ್ಛತೆಯಲ್ಲಿ ತೊಡಗುವ ದಲಿತ ಸಮುದಾಯ ಉದ್ಧಾರವಾಗಲು ಈ ವರದಿ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

    ವಕೀಲ ವೆಂಕಟೇಶ್, ದೇವರಾಜ್, ವೈ.ರಾಜಣ್ಣ, ಸುರೇಶ್, ರುದ್ರಪ್ಪ, ರವಿ, ರಾಮಚಂದ್ರಪ್ಪ, ಕೆಂಚಪ್ಪ, ಗಂಗಾಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts