More

    ಸದಾಶಿವ ಆಯೋಗ ಜಾರಿಗೆ ಶಿಫಾರಸ್ಸು ಬೇಡ


    ಯಾದಗಿರಿ: ನ್ಯಾ.ಎಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸದಂತೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದಿಂದ ಶನಿವಾರ ನಗರದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರಗೆ ಮನವಿ ಸಲ್ಲಿಸಲಾಯಿತು.

    ರಾಜ್ಯದ ಪರಿಶಿಷ್ಟ ಜಾತಿಗಳ ಸ್ಥಿತಿಗತಿ, ಸರಕಾರದ ಸೌಲಭ್ಯಗಳ ಹಂಚಿಕೆ ಮತ್ತು ವಿತರಣೆಯಲ್ಲಿ ಆಗಿರುವ ತಾರತಮ್ಯ ಕುರಿತು ಅಧ್ಯಯನ ಮಾಡಲು 2005ರಲ್ಲಿ ಸರಕಾರ ಏಕ ಸದಸ್ಯ ಆಯೋಗ ವನ್ನು ರಚನೆ ಮಾಡಿತ್ತು. ನ್ಯಾ.ಎನ್ವೈ ಹನುಮಂತಪ್ಪ, ನ್ಯಾ.ಬಾಲಕೃಷ್ಣ ಅವರ ನಂತರದಲ್ಲಿ ಆಯೋಗದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ನ್ಯಾ.ಎಜೆ ಸದಾಶಿವ ಅವರು 2012ರಲ್ಲಿ ತಮ್ಮ ಅಂತಿಮ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ. ಸೋರಿಕೆಯಾಗಿರುವ ಈ ವರದಿಯ ಶಿಪಾರಸ್ಸುಗಳನ್ನು ಗಮನಿಸಿದಾಗ ಆಯೋಗದ ರಚನೆಯ ಉದ್ದೇಶಗಳಿಗೆ ವಿರುದ್ಧವಾಗಿರುವಂತೆ ಕಂಡು ಬಂದಿವೆ ಎಂದು ಸಮಾಜದ ಮುಖಂಡರು ಆರೋಪಿಸಿದರು.

    ಈಗಾಗಲೇ ಮುಕ್ತಾಯಗೊಂಡಿರುವ ಸದಾಶಿವ ಆಯೋಗದ ವರದಿಯನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರಕಾರ ಕೇಂದ್ರ ಸಕರ್ಾರಕ್ಕೆ ಶಿಪಾರಸ್ಸು ಮಾಡಬಾರದು. ಒಂದು ವೇಳೆ ಮಾಡಿದ್ದೇ ಆದಲ್ಲಿ ಬರುವ ಚುನಾವಣೆಯಲ್ಲಿ ನಮ್ಮ ಸಮುದಾಯ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts