More

    ಸದಾಶಿವ ಆಯೋಗ ಜಾರಿಗೆ ಶಿಫಾರಸ್ಸು ಬೇಡ


    ಯಾದಗಿರಿ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸದಂತೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ನಗರದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರಗೆ ಮನವಿ ಸಲ್ಲಿಸಲಾಯಿತು.

    ರಾಜ್ಯದ ಪರಿಶಿಷ್ಟ ಜಾತಿಗಳ ಸ್ಥಿತಿಗತಿ, ಸರಕಾರದ ಸೌಲಭ್ಯಗಳ ಹಂಚಿಕೆ ಮತ್ತು ವಿತರಣೆಯಲ್ಲಿ ಆಗಿರುವ ತಾರತಮ್ಯ ಕುರಿತು ಅಧ್ಯಯನ ಮಾಡಲು 2005ರಲ್ಲಿ ಸರಕಾರ ಏಕ ಸದಸ್ಯ ಆಯೋಗ ವನ್ನು ರಚನೆ ಮಾಡಿತ್ತು. ನ್ಯಾ.ಎನ್ವೈ ಹನುಮಂತಪ್ಪ, ನ್ಯಾ.ಬಾಲಕೃಷ್ಣ ಅವರ ನಂತರದಲ್ಲಿ ಆಯೋಗದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ನ್ಯಾ.ಎಜೆ ಸದಾಶಿವ ಅವರು 2012ರಲ್ಲಿ ತಮ್ಮ ಅಂತಿಮ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ. ಸೋರಿಕೆಯಾಗಿರುವ ಈ ವರದಿಯ ಶಿಪಾರಸ್ಸುಗಳನ್ನು ಗಮನಿಸಿದಾಗ ಆಯೋಗದ ರಚನೆಯ ಉದ್ದೇಶಗಳಿಗೆ ವಿರುದ್ಧವಾಗಿರುವಂತೆ ಕಂಡು ಬಂದಿವೆ ಎಂದು ಸಮಾಜದ ಮುಖಂಡರು ಆರೋಪಿಸಿದರು.

    ನೆರೆಯ ಆಂಧ್ರಪ್ರದೇಶ ಸರಕಾರ 2005 ರಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡಿತ್ತು. ಇ.ವಿ.ಚಿನ್ನಯ್ಯ ವಿರುದ್ಧ ಆಂದ್ರ ಸರಕಾರ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸುವ ಅಧಿಕಾರ ರಾಜ್ಯ ಸರಕಾರಗಳಿಗೆ ಇಲ್ಲ ಎಂದು ಆದೇಶಿಸಿದೆ. ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡುವ ಪ್ರಸ್ತಾವನೆ ಕೇಂದ್ರ ಸರಕಾರದ ಬಳಿ ಇದೆಯಾ? ಎಂದು ರಾಜ್ಯಸಭಾ ಸದಸ್ಯರಾದ ಜಿವಿಎಲ್ ನರಸಿಂಹ ರಾವ್ ಎಂಬುವವರು ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದರು. ದಕ್ಕೆ ಲಿಖಿತವಾಗಿ ಉತ್ತರಿಸಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ಎ.ನಾರಾಯಣ ಸ್ವಾಮಿ, ಪ್ರಸ್ತುತ ನಮ್ಮ ದೇಶದ ಸಂವಿಧಾನದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ವರ್ಗೀಕರಣ ಮಾಡಲು ಅವಕಾಶವಿಲ್ಲ. ಬಹುಸಂಖ್ಯಾತ ರಾಜ್ಯಗಳು ಈ ವರ್ಗೀಕರಣವನ್ನು ವಿರೋಧಿಸಿವೆ ಎಂದು ಉತ್ತರಿಸಿದ್ದಾರೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts