More

    ಸದಾಶಿವ ಆಯೋಗ ವರದಿ ಜಾರಿಯಾಗಲಿ

    ಜೊಯಿಡಾ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕರ್ನಾಟಕ ಆದಿಜಾಂಬವ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಚಂದ್ರಕಾಂತ ಕಾದ್ರೋಳಿ ಬಣ ಹಾಗೂ ಭೀಮಸೇನೆ ನೇತೃತ್ವದಲ್ಲಿ ಧಾರವಾಡದಿಂದ ಉಳವಿಯವರೆಗೆ ಪಾದಯಾತ್ರೆ ನಡೆಸಿ ಕಂದಾಯ ಇಲಾಖೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಸೋಮವಾರ ಉಳವಿಯಲ್ಲಿ ಪಾದ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಆದಿಜಾಂಬವ ಸಂಘಟನೆಯ ಜಿಲ್ಲಾ ಅಧ್ಯಕ್ಷ ವೆಂಕಟೇಶ ಸಗಬಾ ಮಾತನಾಡಿ, ಸಾಮಾಜಿಕ ಶೋಷಣೆಗೆ ಒಳಗಾಗಿರುವ ಪರಿಶಿಷ್ಠ ಜಾತಿಗಳ ಅಭಿವೃದ್ಧಿಗಾಗಿ ಮಾದಿಗ ಸಮಾಜಕ್ಕೆ ಒಳಮೀಸಲಾತಿ ಮತ್ತು ದುಡಿಯುವ ವರ್ಗಕ್ಕೆ ಉದ್ಯೋಗ ಕಲ್ಪಿಸುವುದಕ್ಕೆ ರಾಜ್ಯ ಸರ್ಕಾರ ನ್ಯಾಯ ಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದರು.

    ಸಂಘಟನೆ ಪ್ರಮುಖರಾದ ಅಶೋಕ ದೊಡ್ಮನಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿಯ ಅಧ್ಯಕ್ಷ ಚಂದ್ರಕಾಂತ ಕಾದ್ರೋಳಿ, ಆದಿಜಾಂಬವ ಸಂಘಟನೆ ಜಿಲ್ಲಾಧ್ಯಕ್ಷ ವೆಂಕಟೇಶ ಸಗಬಾ, ಭೀಮ ಸೇನೆ ಅಧ್ಯಕ್ಷ ಆನಂದ ಮಾದರ, ಕಮೇಶ ಹಾದಿಮನಿ, ಗದಿಗೆಪ್ಪ ಹಂಚಿನಮನಿ, ಮಹೇಶ ಹುಲ್ಲಣ್ಣವರ, ಸಂಗಮೇಶ ಮಾದರ, ಗಿರೀಶ ಎನ್.ಎಸ್, ಕರಿಯಪ್ಪ ಮಾದರ, ಶಂಕರ ದೊಡ್ಡಮನಿ, ಮಂಜುನಾಥ ದೊಡ್ಡಮನಿ, ಬಸವರಾಜ ಮಾದರ, ಶಂಕರ ಹರಿಜನ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts