More

    ಸದನ ಸಮಿತಿ ವರದಿಯತ್ತ ಎಲ್ಲರ ಕುತೂಹಲ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂಬ ಹಿಂದು ಪರ ಸಂಘಟನೆಗಳ ಬೇಡಿಕೆಯ ಹಿನ್ನೆಲೆಯಲ್ಲಿ ರಚಿಸಲಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರನ್ನೊಳಗೊಂಡ ಸದನ ಸಮಿತಿಯು ಸೋಮವಾರ (ಆ. 29) ಸಲ್ಲಿಸಲಿರುವ ವರದಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

    ಸದನ ಸಮಿತಿಯು ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುತ್ತದೋ ಅಥವಾ ನಿರಾಕರಿಸುತ್ತದೋ ಎಂಬುದು ಕುತೂಹಲದ ಸಂಗತಿಯಾಗಿದೆ. ಈ ಕುತೂಹಲವು ಕೆಲವರಿಗೆ ಆತಂಕದ ಸಂಗತಿಯೂ ಆಗಿದೆ. ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಅವರು ಹೇಳಿರುವಂತೆ ಈ ವಿಷಯದಲ್ಲಿ ಸದನ ಸಮಿತಿಯ ತೀರ್ವನವೇ ಅಂತಿಮವಂತೆ.

    ಹಿಂದು ಸಂಘಟನೆಗಳಿಗೆ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವುದೋ, ಪಾಲಿಕೆ ವತಿಯಿಂದಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದೋ, ಆಚರಣೆಗೆ ಅವಕಾಶ ನೀಡಿದರೆ ಎಷ್ಟು ದಿನ ಎಂಬೆಲ್ಲ ಪ್ರಶ್ನೆಗಳಿಗೆ ಸದನ ಸಮಿತಿಯ ವರದಿಯಲ್ಲಿ ಉತ್ತರ ಸಿಗಲಿದೆ ಎಂದು ಭಾವಿಸಲಾಗಿದೆ.

    ಐವರು ಸದಸ್ಯರಲ್ಲಿ ಕಾಂಗ್ರೆಸ್ಸಿನ ಇಮ್ರಾನ್ ಎಲಿಗಾರ ಹಾಗೂ ನಿರಂಜನ ಹಿರೇಮಠ ಸದನ ಸಮಿತಿಯಿಂದ ದೂರ ಉಳಿದಿದ್ದಾರೆ. ಸಮಿತಿಗೆ ಸಿಕ್ಕ 3 ದಿನಗಳಲ್ಲಿ ಐವರು ಸದಸ್ಯರು ಒಟ್ಟಿಗೆ ಸೇರಿ ಒಮ್ಮೆಯೂ ಸಭೆ ನಡೆಸಿಲ್ಲ. ಸಮಿತಿಯಲ್ಲಿ ಜೆಡಿಎಸ್, ಪಕ್ಷೇತರ, ಎಐಎಂಐಎಂ ಪಕ್ಷದ ಸದಸ್ಯರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯೊಂದಿಗೆ ಹೊಸದಾಗಿ ಸಮಿತಿ ರಚಿಸುವಂತೆ ಪಾಲಿಕೆಯ ವಿರೋಧ ಪಕ್ಷದ ನಾಯಕ ದೋರಾಜ ಮಣಿಕುಂಟ್ಲ ಆಗ್ರಹಿಸಿದ್ದಾರೆ.

    ‘ಚರ್ಚೆ ನಡೆಸಲು ಕಾಂಗ್ರೆಸ್ಸಿನ ಇಮ್ರಾನ್ ಎಲಿಗಾರ, ನಿರಂಜನ ಹಿರೇಮಠ ಅವರಿಗೆ ಆಹ್ವಾನಿಸಿದ್ದೆವು. ಬರುತ್ತೇವೆ ಎಂದು ಹೇಳಿ ಒಮ್ಮೆಯೂ ಬಂದಿಲ್ಲ. ನಾವು ಬಿಜೆಪಿಯ ಮೂವರು ಸಭೆ ಸೇರಿದ್ದೇವೆ. ರಾಜಕೀಯ ಮುಖಂಡರನ್ನು ಸಂರ್ಪಸಿದ್ದೇವೆ. ನ್ಯಾಯಾಲಯದ ನಿರ್ಣಯಗಳನ್ನು ಆಧಾರವಾಗಿ ಇಟ್ಟುಕೊಂಡಿದ್ದೇವೆ. ಸೋಮವಾರ ಬೆಳಗ್ಗೆ 11 ಗಂಟೆಗೆ ವರದಿ ಸಲ್ಲಿಸುತ್ತೇವೆ’ ಎಂದು ಸದನ ಸಮಿತಿ ಅಧ್ಯಕ್ಷ ಸಂತೋಷ ಚವ್ಹಾಣ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಪರ-ವಿರೋಧ ಮನವಿ: ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂದು ಕೋರಿ ಸದನ ಸಮಿತಿಗೆ ರಾಣಿ ಚನ್ನಮ್ಮ ಗಣೇಶ ಉತ್ಸವ ಸಮಿತಿ, ಹಿಂದುಸ್ತಾನ ಜನತಾ ಪಾರ್ಟಿ, ಹಿಂದು ಜಾಗರಣ ವೇದಿಕೆ ಹಾಗೂ ಶ್ರೀ ರಾಮ ಸೇನಾ ಮನವಿ ಸಲ್ಲಿಸಿವೆ. ಅವಕಾಶ ನೀಡಬಾರದೆಂದು ಎಐಎಂಐಎಂ ಪಕ್ಷ ಮನವಿ ನೀಡಿದೆ.

    ಆ. 25ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದನ ಸಮಿತಿ ರಚಿಸಿ ಸೋಮವಾರ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಗಣೇಶ ಹಬ್ಬ ಸಮೀಪಿಸುತ್ತಿರುವಂತೆ ಹಾಗೂ ಸದನ ಸಮಿತಿ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರ್ಪಾಂಗ್ ಮಾಡಲಾಗಿದ್ದ ವಾಹನಗಳನ್ನು ತೆರವುಗೊಳಿಸಿ ಎಲ್ಲ 3 ಗೇಟ್​ಗಳನ್ನು ಬಂದ್ ಮಾಡಿ ಬೀಗ ಜಡಿಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts