More

    ಸತಾಯಿಸದೆ ಜನರ ಕೆಲಸ ಮಾಡಿಕೊಡಿ

    ಅರಕಲಗೂಡು: ತಾಲೂಕಿನ ದೂರದ ಊರುಗಳಿಂದ ಬರುವ ಸಾರ್ವಜನಿಕರನ್ನು ಸತಾಯಿಸದೆ ಕಾನೂನು ಬದ್ಧವಾದ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಬೇಕು ಎಂದು ಜಿಲ್ಲಾ ಲೋಕಾಯುಕ್ತ ಎಸ್‌ಪಿ ಮಲ್ಲಿಕ್ ಅಧಿಕಾರಿಗಳಿಗೆ ಸೂಚಿಸಿದರು.

    ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು. ಸಾರ್ವಜನಿಕರ ಕೆಲಸ ಕಾರ್ಯಗಳು ಕ್ರಮಬದ್ಧವಾಗಿ ನಡೆಯಬೇಕು ಹಾಗೂ ತಮ್ಮ ಕೆಲಸಕ್ಕಾಗಿ ಜನರು ಕಚೇರಿಗೆ ಪದೇ ಪದೆ ಅಲೆಸುವುದು, ಹಣಕ್ಕಾಗಿ ಪೀಡಿಸುವಂತಹ ಪ್ರಕರಣಗಳು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಹಿಂದೆ ಭೇಟಿ ನೀಡಿದ್ದ ವೇಳೆ ಬಂದಿದ್ದ ದೂರುಗಳ ಇತ್ಯರ್ಥ ಕುರಿತು ಮಾಹಿತಿ ಪಡೆದು ಸಲಹೆ, ಸೂಚನೆ ನೀಡಿದರು.

    ಕಂದಾಯ, ಸರ್ವೇ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 10 ದೂರುಗಳು ಸಲ್ಲಿಕೆಯಾದವು. ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತರಿಗೆ ಮಂಜೂರಾದ ಜಮೀನಿನ ಖಾತೆ ಮಾಡಿಕೊಡದಿರುವ ಕುರಿತು ಹೆಚ್ಚಿನ ದೂರುಗಳು ಇದ್ದವು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಲಾಯಿತು.

    ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಿಲ್ಪಾ, ತಹಸೀಲ್ದಾರ್ ಬಸವ ರೆಡ್ಡಪ್ಪ ರೋಣದ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts