More

    ಸತತ ಅಧ್ಯಯನದಿಂದ ಉತ್ತಮ ಬದುಕು

    ಎಚ್.ಡಿ.ಕೋಟೆ: ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಮೂಲಕ ಉನ್ನತ ವ್ಯಾಸಂಗ ಮಾಡಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಮೈಸೂರು ವಕೀಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕಿವಿಮಾತು ಹೇಳಿದರು.

    ಪಟ್ಟಣದ ವಿಶ್ವ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ತಮ್ಮದೇ ಆದ ಜ್ಞಾನ ಹಾಗೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಹೊರ ತರುವಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದರು.

    ರಾಷ್ಟ್ರೀಯ ಮಾನವ ಹಕ್ಕುಗಳ ರಾಷ್ಟ್ರೀಯ ಕಾರ್ಯಾಧ್ಯಕ್ಷ ಇಬ್ರಾಹಿಂ ಮಾತನಾಡಿ, ಗರ್ಭದಲ್ಲೇ ಹುಟ್ಟುವ ಮಗುವಿನಿಂದ ಹಿಡಿದು ವೃದ್ಧರವರೆಗೂ ಮಾನವ ಹಕ್ಕುಗಳ ರಕ್ಷಣೆ ಅತಿ ಮುಖ್ಯ ಎಂದರು.

    ಹಿರಿಯ ವಕೀಲೆ ಸರಸ್ವತಿ ಮಾತನಾಡಿ, ವಿದ್ಯಾರ್ಥಿಗಳು ಎಂದರೆ ತಮ್ಮ ಆಸುಪಾಸಿನಲ್ಲಿ ನಡೆಯುವ ಎಲ್ಲ ಮಾಹಿತಿಗಳನ್ನು ಜೀವಂತವಾಗಿ ಸೆರೆ ಹಿಡಿಯುವ ಜೀವಂತ ಸಿಸಿ ಕ್ಯಾಮರಾಗಳು. ಇಂತಹ ಮಕ್ಕಳು ದೇವರಿಗೆ ಸಮ. 18 ವರ್ಷದ ಒಳಗಿನ ಎಲ್ಲರೂ ಸಹ ಮಕ್ಕಳೇ. ಒಳ್ಳೆಯ ರೀತಿಯಲ್ಲಿ ಅವರ ಸರಿ-ತಪ್ಪುಗಳನ್ನು ತಿದ್ದುವ ಹೊಣೆ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದರು.

    ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ವಕೀಲ ವೆಂಕಟೇಶ್, ಆಪ್ತ ಸಮಾಲೋಚಕಿ ಸರಸ್ವತಿ, ವಿಶ್ವ ಭಾರತಿ ಕಾಲೇಜು ಪ್ರಾಂಶುಪಾಲ ಕುಮಾರಸ್ವಾಮಿ, ಮಾನವ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಕುಮಾರ್, ಲಕ್ಷ್ಮೀಕಾಂತ್, ರಾಘವೇಂದ್ರ, ಜವರನಾಯಕ, ಸತೀಶ್‌ಕುಮಾರ್, ಮನೋಜ್, ಅನು, ನಾಗರಾಜು, ಬಸವರಾಜು, ತೋಪನಯ್ಯ, ಪ್ರಕಾಶ್, ಮಹದೇವ, ಸುರೇಶ್, ಮೃತ್ಯುಂಜಯ, ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts