More

    ಸಣ್ಣ ಹೈನುಗಾರರಿಂದ ಸಹಕಾರಿ ಸಂಘಗಳ ಅಭಿವೃದ್ಧಿ: ರವಿರಾಜ್ ಹೆಗ್ಡೆ

    ಕೊಕ್ಕರ್ಣೆ: ಲಾಕ್‌ಡೌನ್‌ನಿಂದ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ವಿತರಿಸಲು ಸಾಧ್ಯವಾಗದೇ ಕೆಎಂಎಫ್ ನಷ್ಟ ಅನುಭವಿಸಬೇಕಾಯಿತು. ಆದರೆ ಆತ್ಮ ನಿರ್ಭರ ಭಾರತ ಸಹಕಾರದಿಂದ ಗ್ರಾಮೀಣ ಮಟ್ಟದಲ್ಲಿ ಉತ್ಪಾದಿಸಿದ ವಸ್ತುಗಳನ್ನು ಪೇಟೆಯಲ್ಲಿ ಮಾರುವುದರಿಂದ ಹೆಚ್ಚಿನ ಲಾಭ ದೊರೆಯಿತು. ಇದರಿಂದಾಗಿ ಸಹಕಾರಿ ಸಂಘಗಳ ಬೆಳವಣಿಗೆಯಾಯಿತು ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಹೇಳಿದರು.

    ಸಂತೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ದ.ಕ. ಸಹಕಾರಿ ಹಾಲು ಒಕ್ಕೂಟ ವತಿಯಿಂದ ಸಂತೆಕಟ್ಟೆಯಲ್ಲಿ ಆಯೋಜಿಸಲಾದ 67ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸಂಘದ ಅಧ್ಯಕ್ಷ ಎ.ಉಮಾಕಾಂತ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

    ದ.ಕ.ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ.ಸುರೇಶ್, ಸಹಾಯಕ ವ್ಯವಸ್ಥಾಪಕ ಡಾ.ಧನಂಜಯ್, ಉಪವ್ಯವಸ್ಥಾಪಕ ಡಾ.ಅನಿಲ್ ಕುಮಾರ್, ಕರ್ಜೆ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ದಯಾನಂದ, ಮಣಿಪಾಲ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕಿ ನವ್ಯಾ, ಚೆಗ್ರಿಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾಗರಾಜ ಉಳಿತ್ತಾಯ, ಪಶುವೈದ್ಯಾಧಿಕಾರಿ ಮಂಜುನಾಥ ಅಡಿಗ, ವಿಸ್ತರಣಾಧಿಕಾರಿ ಮಂಜುನಾಥ, ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ, ನಿರ್ದೇಶಕರು, ಸಿಬ್ಬಂದಿ, ಹೈನುಗಾರರು ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ನಿವೃತ್ತ ಆಡಳಿತ ನಿರ್ದೇಶಕರಾದ ಲಕ್ಷ್ಮಣ ಗಡಿಯಾರ್, ಆನಂದ ನಾಯ್ಕ, ಸ್ಥಳೀಯ ಉದ್ಯಮಿ ನರಸಿಂಹ ಗಡಿಯಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸಂಘದ ನಿರ್ದೇಶಕ ಶೇಖರ ಶೆಟ್ಟಿ ಸ್ವಾಗತಿಸಿ, ಕೊಕ್ಕರ್ಣೆ ಸಿಂಡಿಕೆಟ್ ರೈತ ಸೇವಾ ಸಹಕಾರಿ ಸಂಘ ಮಾಜಿ ನಿರ್ದೇಶಕ ಮನೋಜ್ ಶೆಟ್ಟಿ ನಿರೂಪಿಸಿ ವಂದಿಸಿದರು.

    ನಂದಿನಿ ಆನ್ ವೀಲ್ಸ್-ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಗ್ರಾಹಕರನ್ನು ತಲುಪಲು ಸಜ್ಜಾಗಿದೆ. ಜಾತ್ರೆ ಸಭೆ ಸಮಾರಂಭ ನಡೆಯುವಲ್ಲಿ ಈ ವಾಹನವನ್ನು ಕೊಂಡೊಯ್ದು ವ್ಯಾಪಾರ ಮಾಡುವ ಮೂಲಕ ನಂದಿನಿ ಉತ್ಪನ್ನಗಳನ್ನು ಎಲ್ಲೆಡೆ ಪರಿಚಯಿಸಲು ಸಾಧ್ಯವಾಗಿದೆ. ಇದು ವೋಕಲ್ ಫಾರ್ ಲೋಕಲ್ ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿಯಲ್ಲಿ ನಡೆಯಲಿದೆ.
    |ಕೆ.ರವಿರಾಜ್ ಹೆಗ್ಡೆ ದ.ಕ.ಸಹಕಾರಿ ಹಾಲು ಒಕ್ಕೂಟ ಅಧ್ಯಕ್ಷ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts