More

    ಸಡಿಲಿಕೆ ಎಂದು ಬೀದಿಗಿಳಿದರೆ ಅಪಾಯ

    ಭಾಲ್ಕಿ: ಕರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಕಣ್ಣು, ಬಾಯಿ, ಮೂಗಿಗೆ ಪದೇಪದೆ ಕೈ ಹಚ್ಚಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಸಲಹೆ ನೀಡಿದರು. ಹಲಬರ್ಗಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿ ಮಾತನಾಡಿದ ಅವರು, ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿದ್ದು ಸಮಂಜಸವಲ್ಲ. ಜನರು ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
    ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ ಎಂದು ರಸ್ತೆಗಿಳಿಯಬಾರದು. ಮಾಸ್ಕ್ ಧರಿಸಿ, ನಮ್ಮಲ್ಲಿ ಬಗ್ಗೆ ನಾವೇ ಜಾಗೃತಿ ಮೂಡಿಸಿಕೊಳ್ಳಬೇಕು. ಕರೊನಾ ನಿಯಂತ್ರಣ ಕಾರ್ಯದಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪತ್ರಕರ್ತರ ಪಾತ್ರ ಅಪಾರವಾಗಿದೆ ಎಂದು ಬಣ್ಣಿಸಿದರು.
    ಜೆಡಿಎಸ್ ತಾಲೂಕು ಅಧ್ಯಕ್ಷ ಗೋವಿಂದ ಬಿರಾದಾರ, ಪ್ರಮುಖರಾದ ಶ್ರವಣಕುಮಾರ ಗಾಯಕವಾಡ, ಉಮಾಕಾಂತ ಪ್ರಭಾ, ವೀರಶೆಟ್ಟಿ ಮೂಲಗೆ, ಶಿವಕುಮಾರ ಮಲ್ಲಾಸೂರೆ, ಗಂಗಾಧರ ಹೊಸಳ್ಳಿ, ಚಂದ್ರಕಾಂತ ಕಾರಬಾರಿ, ಸುರೇಶ ಜೆಮಶೆಟ್ಟಿ, ಶಿವಕುಮಾರ ಪಟನೆ, ಕಾಶಪ್ಪ ಸೀತಾ, ನಾಗಯ್ಯ ಸ್ವಾಮಿ, ಬಸಪ್ಪ ಮೂಲಗೆ, ಅಂತೇಶ ಮರೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts