More

    ಸಕ್ಕರೆ ಕಾಯಿಲೆ ಇದೆ ಎಂದು ಕುಗ್ಗದಿರಿ

    ಚಿತ್ರದುರ್ಗ:ಸಿರಿಧಾನ್ಯ,ಸೊಪ್ಪು,ತರಕಾರಿಗಳ ಸೇವನೆ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳ ಬೇಕೆಂದು ಆಯು ಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಹೇಳಿದರು.

    ನೆಹರು ಯುವ ಕೇಂದ್ರ,ಪ್ರಜಾಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ,ಶ್ರೀಕ್ಷೇತ್ರ ಧ ರ್ಮಸ್ಥಳ ಗ್ರಾಮಾಭಿವೃದ್ಧಿಯ ಸಿರಿಮಿಲೆಟ್ ಹಾಗೂ ರೋಟರಿ ಕ್ಲಬ್‌ನಿಂದ ರೋಟರಿ ಬಾಲಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಿರಿಧಾನ್ಯ ಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು,ಮೂತ್ರ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರಬೇಕು.

    ಅಲ್ಪಪ್ರಮಾಣ ದಲ್ಲಿ ಆಗಾಗ್ಗೆ ಆಹಾರವನ್ನು ಸೇವಿಸುತ್ತಿರಬೇಕು. ಕಾಯಿಲೆ ಇದೆ ಎಂದು ಕುಗ್ಗದೆ ಯೋಗ,ಧ್ಯಾನ,ಪ್ರಾಣಾಯಾಮ,ನಡಿಗೆ ಹಾಗೂ ನಿಯ ಮಿತವಾಗಿ ಔಷಧ ಸೇವಿಸ ಬೇಕೆಂದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಬಿ.ಅಶೋಕ್ ಮಾತನಾಡಿ,ಯುವ ಪೀಳಿಗೆಗೆ ಸಿರಿಧಾನ್ಯಗಳ ಸೇವನೆ ಯಿಂದಾಗುವ ಪ್ರಯೋಜನಗಳನ್ನು ತಿಳಿಸಬೇಕಿದೆ ಎಂದರು.

    ಸಿರಿ ಮಿಲ್ಲೆಟ್ ಸಂಯೋಜನಾಧಿಕಾರಿ ಅಭಿಷೇಕ್, ರೋಟ ರಿ ಕ್ಲಬ್ ಪ್ರಮುಖರಾದ ಕನಕರಾಜು,ಎಂ.ಬಿ.ಶಂಕರಪ್ಪ,ಎಸ್.ಲಕ್ಷ್ಮೀಕಾಂತ್,ಗಾಯತ್ರಿ ಶಿವರಾಂ,ಅನುಸೂಯಮ್ಮ,ಓಂಕಾರಮ್ಮ, ಶ್ರೀನಿವಾಸ್,ಅರುಣ್‌ಕುಮಾರ್,ಎಸ್.ವಿ.ಗುರುಮೂರ್ತಿ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts