More

    ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಿ: ನೆಲಮಂಗಲದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸಲಹೆ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ವಿದ್ಯಾರ್ಥಿಗಳು ಸಕಾರಾತ್ಮಕ ವಿಚಾರಗಳ ಬಗ್ಗೆ ಚಿಂತಿಸುವುದನ್ನು ಮೈಗೂಡಿಸಿಕೊಂದರೆ ಮಾತ್ರ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತಿಳಿಸಿದರು.
    ನಗರದ ದಾನೋಜಿಪಾಳ್ಯ ಬಳಿಯ ಪುಷ್ಪಬೈರೇಗೌಡ ಕನ್ವೇನ್ಷನ್ ಹಾಲ್‌ನಲ್ಲಿ ಶ್ರೀ ಶಿರಡಿ ಸಾಯಿ ಎಜುಕೇಷನ್ ಟ್ರಸ್ಟ್ ಹಾಗೂ ಹೊಯ್ಸಳ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಅಯೋಜಿಸಿದ್ದ ಪ್ರಥಮ ವರ್ಷದ ಕಲಾ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.
    ಮನುಷ್ಯನಿಗೆ ತನ್ನನ್ನು ತಾನು ಜಾಗೃತಿಗೊಳಿಸಿಕೊಳ್ಳುವ ವಿಶೇಷ ಶಕ್ತಿ ದೇವರು ಕುರುಣಿಸಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಹಾದಿಯಲ್ಲಿ ನಡೆಯಬೇಕು ಎಂದರು.
    ಜ್ಞಾನ ಎಂಬುದು ವಿಶಾಲವಾಗಿದ್ದು, ಶ್ರದ್ಧೆಯಿಂದ ಕಲಿಯಬೇಕು. ಶಿಕ್ಷಕರು ಒಂದು ಗಂಟೆಗೆ ಮಾಡುವ ಪಾಠಕ್ಕೆ ಸುಮಾರು 3 ಗಂ ಅಭ್ಯಾಸ ಮಾಡಿಕೊಂಡು ಬರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ತರಗತಿಯಲ್ಲಿ ಕೇಳಿಸಿಕೊಂಡ ವಿಷಯವನ್ನು ಆಲೋಚನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಕಠಿಣ ಪರಿಶ್ರಮದೊಂದಿಗೆ ಸ್ವಯಂ ಪ್ರಶ್ನಿಸಿಕೊಳ್ಳುವ ಗುಣ ಕಲಿತಯಬೇಕು. ಸಾಧನೆ ಮಾಡುವುದು ಪ್ರತಿಯೊಬ್ಬ ಸಾಧಕನ ಸ್ವತ್ತಾಗಿದ್ದು, ಸಾಧನೆ ಹಾದಿಯ ಕಡೆ ಮುಖ ಮಾಡಬೇಕು. ಪಾಲಕರ ಶ್ರಮದ ಚಿತ್ರಣ ಪ್ರತಿಯೊಬ್ಬರ ಕಣ್ಮುದೆ ಸಾದಾ ಇರಬೇಕು ಎಂದರು.


    ಸಾಹಿತಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಪ್ರಸ್ತುತ ಶಿಕ್ಷಕರು ಕೊಡಬಹುದಾದ ಮಾಹಿತಿ ಅಂಗೈಯಲ್ಲಿಯೇ ದೊರೆಯುತ್ತಿದೆ. ಹೀಗಾಗಿ ಸಮಾಜದಲ್ಲಿ ಅಧ್ಯಾಪಕರು, ಶಿಕ್ಷಕ ಬಗ್ಗೆ ಇದ್ದ ಗೌರವ ಕಡಿಮೆಯಾಗುತ್ತಿದೆ. ಅದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ಸಂಗ್ರಹದ ಜತೆಗೆ ಜ್ಞಾನದ ಅರಿವು ಮೂಡಿಸಬೇಕಿದೆ ಎಂದರು.
    ಜ್ಞಾನಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಆದ್ದರಿಂದ ಜೀವನದಲ್ಲಿ ಜ್ಞಾನ ಎಂಬುದು ಬಹುಮುಖ್ಯವಾಗಿದೆ. ಆಸ್ತಿ-ಅಂತಸ್ತುನ್ನು ಎಲ್ಲರೂ ಸಂಪಾದಿಸಬಹುದು. ಆದರೆ ಜ್ಞಾನ ಸಂಪಾದಿಸುವುದು ಕಷ್ಟ. ಆದ್ದರಿಂದ ಸಾಕಷ್ಟು ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಜ್ಞಾನದ ಬೀಜ ಬಿತ್ತುವ ಕಾರ್ಯ ಮಾಡುತ್ತಿರುವುದರಿಂದ ದೇಶ ವಿಕಾಸದ ಹಾದಿಯಲ್ಲಿ ಸಾಗುತ್ತಿದೆ ಎಂದರು. 2022-23ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀ ಶಿರಡಿ ಸಾಯಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಟಿರಾಮಕೃಷ್ಣಪ್ಪ, ಕಾರ್ಯದರ್ಶಿ ಎನ್.ಜ್ಯೋತಿ, ಟ್ರಸ್ಟಿ ಬಿ.ವಿ.ಸುರೇಶ್, ಹೊಯ್ಸಳ ಪಿಯು ಕಾಲೇಜು ಪ್ರಾಂಶುಪಾಲ ಕೆ.ವಿ.ಗೌರಿಶಂಕರ್, ಹೊಯ್ಸಳ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಹೆಚ್.ಆರ್.ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts