More

    ಸಕಾರಾತ್ಮಕ ಚಿಂತನೆಗಳಿಂದ ಸಮಸ್ಯೆಗೆ ಪರಿಹಾರ ಲಭ್ಯ

    ಕಾರವಾರ: ಸಮಾಜದಲ್ಲಿ ಸಕಾರಾತ್ಮಕ ಚಿಂತನೆಗಳಿಂದ ಜಾಗೃತಿ ಮೂಡಿಸಿದಾಗ ಶ್ರವಣ ದೋಷವಿರುವವರ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಡಿಎಚ್​ಒ ಡಾ.ಜಿ.ಎನ್. ಅಶೋಕ ಕುಮಾರ್ ಹೇಳಿದರು.

    ಡಿಎಚ್​ಒ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

    ಕಿವುಡುತನ ಹುಟ್ಟಿನಿಂದ, ಸೋಂಕಿನಿಂದಲೂ ಅಥವಾ ಕೆಲ ಔಷಧಗಳ ಅಡ್ಡ ಪರಿಣಾಮದಿಂದಲೂ ಬರುತ್ತದೆ. ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಂಡರೆ ದೋಷ ನಿವಾರಿಸಬಹುದು ಎಂದರು. ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ. ರೋಹಿಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಶ್ರವಣ ದೋಷದಿಂದ ಬಳಲುತ್ತಿರುವವರು ಸಾಮಾನ್ಯ ಜನರಂತಾಗಲು ರೆಡ್ ಕ್ರಾಸ್​ನಂತಹ ಸಂಸ್ಥೆಗಳು ಕೈ ಜೋಡಿಸಿ, ಮಕ್ಕಳು, ಹಿರಿಯರಲ್ಲಿ ಶ್ರವಣ ದೋಷವನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಬೇಕು ಎಂದರು. ಕ್ರಿಮ್್ಸ ಸಹಾಯಕ ಪ್ರಾಧ್ಯಾಪಕಿ ಗೀತಾ ಕುರ್ಲೆ , ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಜಿ. ನಾಯ್ಕ, ನಜೀರ್ ಶೇಖ್, ರೋಟರಿ ಸದಸ್ಯ ಸುನೀಲ್​ಸೋನಿ, ಕುಷ್ಠರೋಗ ನಿವಾರಣಾಧಿಕಾರಿ ಡಾ. ಶಂಕರ ರಾವ್, ಡಾ. ಮಹಾಬಲೇಶ್ವರ ಹೆಗಡೆ, ಜನ ವಿಕಾಸ ಸಂಘದ ಅಧ್ಯಕ್ಷೆ ಖೈರುನ್ನಿಸಾ ಶೇಖ್ ಇದ್ದರು. ನಿವೇದಿತಾ ಕೊಳಂಬಕರ ಪ್ರಾರ್ಥಿಸಿದರು. ಪದ್ಮಾವತಿ ಸ್ವಾಗತಿಸಿದರು. ಡಾ. ಅನ್ನಪೂರ್ಣ ವಸ್ತ್ರದ ಪ್ರಸ್ತಾವಿಕ ಮಾತನಾಡಿದರು. ಬಸವರಾಜ್ ಎಸ್. ಕನ್ನಕ್ಕನವರ್, ಅನುಪಮಾ ಅಂಕೋಲೆಕರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts