More

    ಸಂಸ್ಕೃತಿ, ಸಂಪ್ರದಾಯಕ್ಕೆ ಸಿಗಲಿ ಮನ್ನಣೆ

    ಕಲಬುರಗಿ: ಸಂಸ್ಕೃತಿ, ಸಂಪ್ರದಾಯ ಗೌರವಿಸಬೇಕು ಮತ್ತು ನಾವೆಲ್ಲರೂ ಅಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಮೈಸೂರಿನ ಸಂಸ್ಕೃತ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
    ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ್ಪ ಸಭಾ ಮಂಟಪದಲ್ಲಿ ಆಯೋಜಿಸಿದ್ದ ವಿಶ್ವ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಮಾರೋಪ ಭಾಷಣ ಮಾಡಿದ ಅವರು, ಯಾರು ಸಮಾಜಕ್ಕಾಗಿ ಹೋರಾಡುತ್ತಾರೋ, ಅವರ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಇರುತ್ತದೆ ಎಂದರು.
    ದೇಶಕ್ಕೆ ಅನೇಕ ಮಹಾತ್ಮರು ಕೊಡುಗೆ ನೀಡಿದ್ದಾರೆ. ಬಸವಣ್ಣ, ಅಕ್ಕಮಹಾದೇವಿ ಇತರ ಶಿವಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತಿ, ಮೂಢನಂಬಿಕೆ ವಿರುದ್ಧ ಹೋರಾಡಿದ್ದಾರೆ. ಈ ಸಮಸ್ಯೆಗಳನ್ನು ನಾವೆಲ್ಲರೂ ಹೋಗಲಾಡಿಸಬೇಕೆಂದರೆ ಇಂತಹ ಸಮ್ಮೇಳನ ನಿರಂತರ ನಡೆಯುತ್ತಿರಬೇಕು ಎಂದು ಹೇಳಿದರು.
    ಭಾಷೆಗಳಿಗೆ ಗಡಿಯಿಲ್ಲ. ಇತರರನ್ನು ಅರ್ಥ ಮಾಡಿಕೊಳ್ಳಲು ಭಾಷೆ ಸಹಕಾರಿ. ಬೇರೆ ಭಾಷೆ ತಿಳಿದುಕೊಳ್ಳುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಭಾಷೆಗಳ ಪರಿಕಲ್ಪನೆ ವೃದ್ಧಿಗೊಳ್ಳಲು ಇಂತಹ ಸಮ್ಮೇಳನಗಳ ಅವಶ್ಯಕತೆಯಿದೆ ಎಂದು ನುಡಿದರು.
    ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಈ ವಿಶ್ವ ಸಾಹಿತ್ಯ ಸಮ್ಮೇಳನ ಚಿಂತನೆಗಳ ಸಂಗಮವಾಗಿದೆ ಎಂದರು.
    ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ ಪ್ರಾಸ್ತಾವಿಕ ಮಾತನಾಡಿ, ಮತ್ತೊಬ್ಬರಿಗೆ ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇಂತಹ ಮನಸ್ಥಿತಿ ಬೆಳಸಿಕೊಂಡಾಗ ಮಾತ್ರ ಸಮಾಜ ಸದೃಢವಾಗುತ್ತದೆ ಎಂದರು.
    ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ.ಲಕ್ಷ್ಮೀ ಮಾಕಾ, ಡಾ.ಬಸವರಾಜ ಮಠಪತಿ ಉಪಸ್ಥಿತರಿದ್ದರು.

    ಸಂಸ್ಕೃತದ ಮೊದಲ ವಿಶ್ವಕೋಶ ಅಭಿಶಾಸ್ತ್ರ ಚಿಂತಾಮಣಿ
    ಸಂಸ್ಕೃತದ ಮೊದಲ ವಿಶ್ವಕೋಶವಾದ ಅಭಿಶಾಸ್ತ್ರ ಚಿಂತಾಮಣಿ ಬರೆದ 12ನೇ ಶತಮಾನದ ವಿದ್ವಾಂಸ ಮನಸೂಲ್ಲಾಸ ಕಲಬುರಗಿಯವರು ಎಂದು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೆಪುರಂ ಜಿ.ವೆಂಕಟೇಶ ಹೇಳಿದರು.
    ವಿಶ್ವಸಾಹಿತ್ಯ ಸಮ್ಮೇಳನದ 2ನೇ ದಿನ ಸಂಸ್ಕೃತ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಅಭಿಶಾಸ್ತ್ರ ಚಿಂತಾಮಣಿ ವಿಶ್ವಕೋಶವನ್ನು ಸಂಸ್ಕೃತ ವಿವಿ ಕುಲಪತಿಯಾಗಿದ್ದಾಗ ಕನ್ನಡಕ್ಕೆ ಅನುವಾದ ಮಾಡಲಾಗಿತ್ತು ಎಂದು ಸ್ಮರಿಸಿದರು.
    ಈ ವಿಶ್ವಕೋಶ ಆಯವರ್ೇದದಿಂದ ಖಗೋಳ ಭೌತಶಾಸ್ತ್ರವರೆಗಿನ ವಿವಿಧ ವಿಷಯಗಳ ಬಗ್ಗೆ ವಿವರಿಸುತ್ತದೆ. 2ನೇ ವಿಶ್ವಕೋಶವನ್ನು ಕೇಳದಿಯ ಬಸವರಾಜ ಭೋಪಾಲ್ ಬರೆದಿದ್ದು, ಇದು ಖಗೋಳ ಭೌತಶಾಸ್ತ್ರ, ಆಯುರ್ವೇದ, ವೈದ್ಯಕೀಯ ವಿಜ್ಞಾನ, ಗಣಿತ, ಮೂಲ ವಿಜ್ಞಾನ, ಕೃಷಿ, ಪಾಕಶಾಲೆ ಅಭ್ಯಾಸಗಳಿಂದ ಎಲ್ಲ ಕ್ಷೇತ್ರಗಳಲ್ಲಿ ಭಾಷೆಯ ವಿವರ ಮಾಹಿತಿ ನೀಡುತ್ತದೆ ಎಂದರು.
    ನಿವೃತ್ತ ಪ್ರಾಧ್ಯಾಪಕ ಡಾ.ಸುರೇಶ ಹೆರೂರ ಮಾತನಾಡಿ, ಸಂಸ್ಕೃತವ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಕಲೆ, ವಿಜ್ಞಾನ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳನ್ನು ನಿರ್ವಹಿಸುವ ತಾಯಿ ಭಾಷೆಯಾಗಿದೆ ಎಂದು ಹೇಳಿದರು.
    ವಿದ್ವಾಂಸರಾದ ಡಾ.ಕೃಷ್ಣ ಕಾಕಲ್ವಾರ ಮತ್ತು ಡಾ.ಗುರುಮಧ್ವಾಚಾರ್ಯ ನವಲಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ಇದ್ದರು.

    ಜ್ಞಾನ ಮತ್ತು ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿನ ಅನೇಕ ಪ್ರಶ್ನೆಗಳಿಗೆ ಉತ್ತರ ಹೊಂದಿರುವ ಸಂಸ್ಕೃತ ಭಾಷೆ ರಕ್ಷಣೆ, ಸಂರಕ್ಷಿಸುವುದು ತುತರ್ು ಅಗತ್ಯ. ಇಡೀ ಪ್ರಪಂಚದಲ್ಲಿ ಸಂಸ್ಕೃತ ಏಕಮಾತ್ರ ಭಾಷೆಯಾಗಿದ್ದು, ಅದು ಪಾಕಶಾಸ್ತ್ರ ಮತ್ತು ವಿವಿಧ ಋತುವಿನಲ್ಲಿ ಸೇವಿಸಬೇಕಾದ ಆಹಾರದ ಬಗ್ಗೆ ಚಚರ್ಿಸುತ್ತದೆ.
    | ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ,
    ವಿಶ್ರಾಂತ ಕುಲಪತಿ, ಮೈಸೂರು ಸಂಸ್ಕೃತ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts